ರಾಷ್ಟ್ರೀಯ ನೆಟ್‌ಬಾಲ್ ಕ್ವಾರ್ಟರ್ ಫೈನಲ್‌ಗೆ ರಾಜ್ಯ ತಂಡ

ಬಹಾಲಿ.ಮಾ.೨೬- ಛತ್ತೀಸ್ ಗಡದ ಬಹಾಲಿಯಲ್ಲಿ ನಡೆದ ೩೮ ನೇ ಹಿರಿಯರ ರಾಷ್ಟ್ರೀಯ ನೆಟ್ ಬಾಲ್ ಚಾಂಪಿಯನ್ ಶಿಫ್ ನಲ್ಲಿ ಇಂದು ಬೆಳಗ್ಗೆ ತೆಲಂಗಾಣದ ಮಹಿಳೆಯರ ತಂಡದ ವಿರುದ್ದ ಗೆಲುವು ಸಾಧಿಸಿದ ಕರ್ನಾಟಕ ಮಹಿಳೆಯರ ತಂಡ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದಿದೆ.
ಕ್ವಾಟರ್ ಪೈನಲ್‌ನಲ್ಲಿ ಉತ್ತರ ಪ್ರದೇಶ ತಂಡದ ವಿರುದ್ಧ ಕಣಕ್ಕಿಳಿಯಲಿದೆ ಎಂದು ಕರ್ನಾಟಕ ಅಮೆಚೂರ್ ನೆಟ್ ಬಾಲ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗಿರೀಶ್ ತಿಳಿಸಿದ್ದಾರೆ.
ಕೇರಳ ಮಹಿಳಾ ತಂಡದ ವಿರುದ್ದ ನಡೆದ ಪಂದ್ಯದಲ್ಲಿ ಕರ್ನಾಟಕ ಮಹಿಳೆಯರ ತಂಡ ೩೦-೨೯ ಅಂಕಗಳ ಅಂತರದಿಂದ ನಿನ್ನೆ ಗೆಲುವು ಸಾಧಿಸಿತ್ತು.
ಇಂದು ಬೆಳಗ್ಗೆ ತೆಲಂಗಾಣ ಮಹಿಳಾ ತಂಡದ ವಿರುದ್ದ ಕರ್ನಾಟಕ ತಂಡ ೩೭-೨೭ ಅಂತರದಿಂದ ಗೆಲುವು ಸಾಧಿಸಿ ಕ್ವಾಟರ್ ಫೈನಲ್ ತಲುಪಿದೆ.
ಮಹಿಳಾ ತಂಡ : ಪವಿತ್ರಾ. ಎನ್ (ನಾಯಕಿ), ನಂದಿನಿ (ಉಪನಾಯಕಿ) , ನಯನ. ವಿ, ರಂಜಿತಾ. ಬಿ.ಜೆ, ಮಾನಸ. ಎಂ, ಹರ್ಷಿನಿ ವಿ, ಮೇಘನಾ. ಬಿ.ಸಿ., ಅಕ್ಷಯ .ಎ,ದೀಪಾ ಟಿ ಆರ್, ನಂದಿನಿ. ಸಿ, ಹರ್ಷಿತಾ.ಎ ಮಂಜುನಾಥ್ ಎಚ್. ಎಂ. ತರಬೇತುದಾರರಾಗಿದ್ದಾರೆ. ತಂಡದ ವ್ಯವಸ್ಥಾಪಕಿಯಾಗಿ ಮಾನಸಾ ಎಲ್ ಜಿ ಕಾರ್ಯನಿರ್ವಹಸುತ್ತಿದ್ದಾರೆ.