
ಆಳಂದ,ಏ.9-ತಾಲೂಕಿನ ನಿಂಬರ್ಗಾದ ಭೀಮರತ್ನ ಸಾಂಸ್ಕøತಿಕ ಕಲಾ ಸೇವಾ ಸಂಸ್ಥೆಯ ವತಿಯಿಂದ ಡಾ.ಬಾಬು ಜಗಜೀವನರಾಮ ಅವರ 116ನೇ ಜಯಂತೋತ್ಸವ ನಿಮಿತ್ಯ ಶನಿವಾರ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಸಮಾಜದ ಹಿರಿಯರಾದ ಪ್ರಭು ಕಟ್ಟಿಮನಿ ಅವರು ಮಾತನಾಡಿ ರಾಷ್ಟ್ರೀಯ ನಾಯಕರ ಜಯಂತಿ ಆಚರಿಸುವುದರ ಮೂಲಕ ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಅಂದಾಗ ಅದಕ್ಕೆ ಅರ್ಥ ಬರುತ್ತೆ ಎಂದರು.
ದತ್ತಾ ಡಿ ಖರ್ಚನ ಮಾತನಾಡಿ ರಾಷ್ಟ್ರೀಯ ನಾಯಕರ ಜಯಂತಿಗಳು ಕೇವಲ ಅವರು ಜನಿಸಿದ ಜಾತಿಗೆ ಸೀಮಿತಗೋಳಿಸದೆ ಎಲ್ಲರೂ ಆಚರಿಸುವಂತಾಗಬೇಕು ಅಂದಾಗ ಅವರ ತತ್ವ ಆದರ್ಶಗಳಿಗೆ ಬೆಲೆ ನೀಡಿದಂತಾಗುತ್ತದೆ. ಜಯಂತಿಗಳ ಆಚರಣೆಯಿಂದ ಅವರ ತತ್ವ ಸಿದ್ಧಾಂತ ಎಲ್ಲರಿಗೂ ತಿಳಿಯುತ್ತದೆ ಎಂದರು.
ವೇದಿಕೆ ಮೇಲೆ ಬಾಬು ಕಟ್ಟಿಮನಿ, ಲಕ್ಷ್ಮಣ ಜವಳಿ, ಸೂರ್ಯಕಾಂತ ಖರ್ಚನ, ಅಣ್ಣಪ್ಪ ಮುರಡಿ, ದೀಲಿಪ ಮಂಗನ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಕಲಾವಿದರಾದ ಧರ್ಮಣ ಖರ್ಚನ, ಶರಣಬಸಪ್ಪ ನಿರ್ಮಲ್ಕರ ಸೇರಿದಂತೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಯಲ್ಲಪ್ಪ ಕಟ್ಟಿಮನಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.