ರಾಷ್ಟ್ರೀಯ ನವಜಾತು ಶಿಶು ವಾರ ಸಪ್ತಾಹ

ಸಿರುಗುಪ್ಪ, ನ.21- ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ರಾಷ್ಟ್ರೀಯ ನವಜಾತು ಶಿಶು ವಾರವು ನ.17ರಿಂದ 21ರವರೆಗೂ ಸಪ್ತಾಹ ಕಾರ್ಯಕ್ರಮವು ಹಮ್ಮಿಕೊಂಡಿದ್ದು, ಪ್ರತಿ ಆರೋಗ್ಯ ಸಂಸ್ಥೆ ಹಾಗೂ ಎಲ್ಲಾಡಿಯೂ ಗುಣ ಮಟ್ಟ, ಸಮಾನತೆ, ಘನತೆಯೊಂದಿಗೆ ನವಜಾತ ಶಿಶುಗಳನ್ನು ಆರೈಕೆಯ ಮಾಡುವ ವಿಧಾನವನ್ನು ತಿಳಿಸುವ ಉದ್ದೇಶವಾಗಿದೆಂದು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈಧ್ಯಾಧಿಕಾರಿ ಡಾ.ದೇವರಾಜ ಹೇಳಿದರು.
ನಗರದ ನೂರು ಹಾಸಿಗೆಯ ಸರ್ಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಸಾರ್ವಜನಿಕ ಆರೋಗ್ಯ ಆಸ್ಪತ್ರೆಯವತಿಯಿಂದ ರಾಷ್ಟ್ರೀಯ ನವಜಾತು ಶಿಶು ವಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜನಿಸಿದ ಮಗುವಿನ ತಕ್ಷಣ ಅರೈಕೆ ವಿಧಾನವನ್ನು ತಾಯಿಗೆ ತಿಳಿಸಿಕೊಡುವುದು, ಶಿಶು ಮರಣವನ್ನು ಕಡಿಮೆ ಮಾಡುವುದು, ಅಪೌಷ್ಠಿಕತೆಯಿಂದ ಬಳುತ್ತಿರುವ ಬಾಣಂತಿ ಗರ್ಭಿಣಿಯರಿಗೆ ಮಾಹಿತಿ ಮನವರಿಕೆ ಮಾಡುವುದು, ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಕೊಂಡಲ್ಲಿ ತಾಯಿ ಮಗುವನ್ನು ಸುರಕ್ಷಿತವಾಗಿಡುವು ಮಗುವುವನ್ನು ರಕ್ಷಿಸುವುದೇ ರಾಷ್ಟ್ರೀಯ ನವಜಾತ ಶಿಶು ವಾರ ಸಾಪ್ತಹವಾಗಿದೆ ಎಂದು ಹೇಳಿದರು.
ಹೆರಿಗೆ ತಜ್ಞ ಡಾ.ಪ್ರಶಾಂತ ಮಾತನಾಡಿ ಜನಿಸಿದ ಮಗುವಿಗೆ ಅರ್ಧಗಂಟೆಗೆಯಲ್ಲಿ ತಾಯಿಯು ಹಾಲು ಉಣ್ಣಿಸಬೇಕು, ಮೊದಲ ಹಾಲು ಅಮೃತಕ್ಕೆ ಸಮವಾಗಿರುತ್ತದೆ, ಇದರಲ್ಲಿ ರೋಗನಿರೋಧಕ ಶಕ್ತಿಯನ್ನು ನೀಡುವ ಗುಣಹೊಂದಿದೆ, ಮಕ್ಕಳಿಗೆ ಬರೆ ಹಾಕುವುದರಿಂದ ರೋಗಗಳಿಗೆ ತುತ್ತಾಗುತ್ತಾರೆ, ಇದರಿಂದ ಮರಣವು ಸಂಭವಿಸಬಹುದು, ಹೆರಿಗೆ ತಾಯಿಯು ಪೌಷ್ಠಿಯುಕ್ತ ಆಹಾರ ಸೇವನೆಯಿಂದ ಮಕ್ಕಳ ಬೆಳವಣಿಗೆ ಉತ್ತಮವಾಗುತ್ತದೆ, ಚಿಕ್ಕಮಕ್ಕಳಿಗೆ ಒಂದು ವರ್ಷದವರೆಗೂ ಜೇನು ತುಪ್ಪ ತಿನ್ನಿಸಬಾರದು, ಜೇನು ತುಪ್ಪ ಚಿಕ್ಕ ಮಕ್ಕಳಿಗೆ ವಿಷವಾಗುತ್ತದೆ, ಹೆಚ್ಚಾಗಿ ಹಸಿರು ತರಕಾರಿಯನ್ನು ಸೇವನೆಯಿಂದ ಆರೋಗ್ಯವಾದ ಬೆಳವಣಿಗೆಯಾಗುತ್ತದೆ, ಹೆರಿಗೆ ತಾಯಿಯು ದಿನಕ್ಕೆ 5ರಿಂದ 6 ಲೀಟರ್ ನೀರು ಕುಡಿಯುವುದರಿಂದ ಆರೋಗ್ಯ ಉತ್ತಮವಾಗುತ್ತದೆ ಎಂದು ಹೇಳಿದರು.
ಮಕ್ಕಳ ತಜ್ಞ ಡಾ.ಅನಿಲ್‍ಕುಮಾರ ಮಾತನಾಡಿ ತಾಯಿಯ ಎದೆ ಹಾಲು ಅಮೃತಕ್ಕೆ ಸಮವಾಗಿರುತ್ತದೆ, ಹೊರಗಿನ ಹಾಲನ್ನು ಕನಿಷ್ಠ 6ತಿಂಗಳವರೆಗೂ ಹಾಕಬಾರದು, ಪ್ಲಾಸ್ಟೀಕ್ ಬಾಟಲ್‍ನಲ್ಲಿ ಹಾಲು ಹಾಕಿ ಕುಡಿಸಬಾರದು, ಮಗುವು ನಿದ್ದೆ ಸರಿಯಾಗಿ ಮಾಡುತ್ತಿಲ್ಲವಾದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಯ ಮಕ್ಕಳ ತಜ್ಞರಲ್ಲಿ ತೋರಿಸಬೇಕು, ಮಗು ಎದೆಹಾಲು ಕುಡಿದ ನಂತರ ಹೆಗಲ ಮೇಲೆ ಮಗುವನ್ನು ಮಲಗಿಸಿ ಬೆನ್ನನ್ನು ತಟ್ಟಬೇಕು ಇದ್ದರಿಂದ ಮಗುವಿಗೆ ಹಾಲು ಜೀರ್ಣವಾಗುತ್ತದೆ, ಮಗು ದಿನಕ್ಕೆ 5ರಿಂದ6 ಬಾರಿ ಮೂರ್ತವಿರ್ಸಜನೆ ಮಾಡುವುದರಿಂದ ಆರೋಗ್ಯವು ಉತ್ತಮವಾಗುತ್ತದೆ, ಒಂದು ಮಗುವಿನಿಂದ ಇನ್ನೊಂದು ಮಗುವಿನ ನಡುವೆ ಅಂತರ ಕಾಯ್ದಕೊಳ್ಳುವುದು ಉತ್ತಮವಾಗಿದೆ ಎಂದು ತಿಳಿಸಿದರು.