ರಾಷ್ಟ್ರೀಯ ತೋಟಗಾರಿಕೆ ಮಂಡಳಿ ನಿರ್ದೇಶಕರಾಗಿ ಪತಂಗೆ ಜಯವಂತರಾವ್

ರಾಯಚೂರು, ಮಾ.೩೧- ರಾಷ್ಟ್ರೀಯ ತೋಟಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿ ಮಂಡಳಿಯ ನಿರ್ದೇಶಕರಾಗಿ ರಾಯ ಚೂರಿನ ಪತಂಗೆ ಜಯವಂತರಾವ್ ಆಯ್ಕೆಯಾ ಗಿದ್ದಾರೆ . ಮಂಡಳಿ ರಾಷ್ಟ್ರೀಯ ಅಧ್ಯಕ್ಷ ಡಾ.ಬಿಜೇಂದ್ರ ಸಿಂಗ್ ಅವರು ನಫೆಡ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ದ ನಿರ್ದೇಶಕರಾಗಿರುವ ಪತಂಗೆ ಜಯವಂತರಾವ್ ಅವರ ಸಹಕಾರಿ ಕ್ಷೇತ್ರದಲ್ಲಿನ ಸುದೀರ್ಘ ೪೦ ವರ್ಷಗಳ ಅನುಭವ ಗುರುತಿಸಿ ತೋಟಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿ ಮಂಡಳಿಗೆ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ್ದಾರೆ. ಕರ್ನಾಟಕ ರಾಜ್ಯದಿಂದ ಏಕೈಕ ವ್ಯಕ್ತಿಯಾಗಿ ಹಾಗೂ ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘದ ಆಧ್ಯಕ್ಷರಾದ ಪತಂಗೆ ಜಯವಂತ ರಾವ್ ಅವರನ್ನು ನಿರ್ದೇಶಕರಾಗಿ ಆಯ್ಕೆಯಾಗಿದರುವುದಕ್ಕೆ ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಹಕಾರ ಸಂಘ ಸಂತಸ ವ್ಯಕ್ತಪಡಿಸಿದೆ . ರಾಷ್ಟ್ರೀಯ ಕೃಷಿ ಸಹಕಾರಿ ಮಹಾಮಂಡಳಿ ಹಾಗೂ ಮಾರ್ಕೆಟಿಂಗ್ : ಫೆಡರೇಶನ್ ಅಡಿ ಸ್ಥಾಪಿಸಲಾದ ಮಂಡಳಿಗೆ ಈರುಳ್ಳಿ ಮತ್ತು ಇತರ ರಫ್ತು ಆಧಾರಿತ ತೋಟಗಾರಿಕೆ ಉತ್ಪನ್ನ ಹೆಚ್ಚಿಸಲು , ಗುಣಮಟ್ಟ ಸುಧಾರಿಸಲು ಸಂಬಂಧಿಸಿದ ತಾಮತ್ತು ಇತರರಿಗೆ ಮಾರ್ಗದರ್ಶನ ನೀಡುವಲ್ಲಿ ಮಂಡಳಿ ಮಹತ್ವದ ಪಾತ್ರ ವಹಿಸುತ್ತದೆ.