ರಾಷ್ಟ್ರೀಯ ಡೆಂಗ್ಯೂ  ಜ್ವರ ಜಾಗೃತಿ  ದಿನಾಚರಣೆ 

ಹರಿಹರ ಮೇ 25; ತಾಲೂಕಿನ   ಕೊಂಡಜ್ಜಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ವೇಳೆ ಆಡಳಿತ ವೈದ್ಯಾಧಿಕಾರಿಗಳಾದ  ಶಶಿಕಲಾ  ಮಾತನಾಡಿ ಬೇಸಿಗೆಕಾಲ ಹಾಗೂ ಮಳೆಗಾಲ ಪ್ರಾರಂಭವಾಗುವುದರಿಂದ ಡೆಂಗು ಜ್ವರದ ಪ್ರಕರಣಗಳು ಉಲ್ಬಣ್ಣವಾಗುತ್ತವೆ. ಆದಕಾರಣ ಸಂಗ್ರಹಿಸಿದ ನೀರನ್ನು ಮುಚ್ಚಿ ಬಳಸಿ. ಡೆಂಗ್ಯೂ ತಡೆಗಟ್ಟಬಹುದಾದ ಕಾಯಿಲೆ. ಭಯ ಬೀಳುವ ಅವಶ್ಯಕತೆ ಇಲ್ಲ. ಹಗಲಿನಲ್ಲಿ ಕಚ್ಚುವ ಈಡಿಸ್  ಸೊಳ್ಳೆಗಳ ನಿಯಂತ್ರಣವೇ ಮುಖ್ಯವಾಗಿದೆ ಆದುದರಿಂದ ಸಮುದಾಯವು ಕೈಜೋಡಿಸಿದರೆ. ಡೆಂಗ್ಯೂ ಜ್ವರ ಮುಕ್ತ ರಾಜ್ಯವನ್ನಾಗಿ ಮಾಡಬಹುದು ಎಂದು ಹೇಳಿದರು.ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ಎಂ. ವಿ.ಹೊರಕೇರಿ ಮಾತನಾಡಿ ಡೆಂಗ್ಯೂ ಜ್ವರ ತೀವ್ರತೆಯಾದರೆ ಚಿಕಿತ್ಸೆ ಫಲಕಾರಿ ಆಗದು. ಡೆಂಗ್ಯೂ ಜ್ವರವನ್ನು ಮೂಳೆ ಮುರಿತದ ಜ್ವರ ಎಂದು ಕರೆಯುತ್ತಾರೆ. ಇತರ ಲಕ್ಷಣಗಳು ಅಧಿಕ ಜ್ವರ. ದೇಹದ ತುಂಬ ನೋವು. ಕಣ್ಣಿನ ಹಿಂಬದಿ ನೋವು. ಕಣ್ಣು ಕೆಂಪಾಗಿರುವುದು. ವಾಕರಿಕೆ ಮತ್ತು ವಾಂತಿ. ವಿಪರೀತ ತಲೆನೋವು. ಆದುದರಿಂದ ಯಾವುದೇ ಜ್ವರ ಬರಲಿ ರಕ್ತ ಪರೀಕ್ಷೆ ಮಾಡಿಸಬೇಕೆಂದರು ಈ ವರ್ಷದ ಘೋಷ ವಾಕ್ಯ ಎಲ್ಲರ ಸಹಭಾಗಿತ್ವದೊಂದಿಗೆ ಡೆಂಗಿಯನ್ನು ಸೋಲಿಸೋಣ. ಎಂದು ಹೇಳುತ್ತಾ ಆರೋಗ್ಯ ಇಲಾಖೆ ಹಾಗೂ ಇತರ ಇಲಾಖೆಗಳು ಮತ್ತು ಸಮುದಾಯದ ಸಹಭಾಗಿತ್ವದಿಂದ ಡೆಂಗ್ಯೂ ಜ್ವರ ನಿಯಂತ್ರಣ ಮಾಡಬಹುದು ಎಂದು ಹಿರಿಯ ಆರೋಗ್ಯ ನಿರೀಕ್ಷಾಧಿಕಾರಿ, ಉಮ್ಮಣ್ಣ ತಿಳಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್ ಮಾತನಾಡಿ ಪ್ರತಿನಿತ್ಯ ಮನೆ ಭೇಟಿ ಸಮಯದಲ್ಲಿ ಜನರಿಗೆ ನಾವು ನೀವು ಡೆಂಗ್ಯೂ ಜ್ವರದ ಬಗ್ಗೆ ಜಾಗೃತಿ ಮೂಡಿಸಬೇಕಾದರೆ ಮನೆ ಸರ್ವೆ ವೇಳೆ, ನೀರು ಸಂಗ್ರಹಿಸಿದ ತೊಟ್ಟೆ. ಬ್ಯಾರಲು. ತೆಂಗಿನ ಚಿಪ್ಪು. ಉಪಯೋಗಕ್ಕೆ ಬಾಟಲಿಗಳು. ಇತ್ಯಾದಿಗಳಲ್ಲಿ ಸಂಗ್ರಹವಾದ ನೀರಿನಲ್ಲಿ ಲಾರ್ವಗಳು ಉತ್ಪತ್ತಿಯಾಗುತ್ತವೆ. ಆದುದರಿಂದ ಸಂಗ್ರಹಿಸಿದ ನೀರನ್ನು ಹೆಚ್ಚು  ಬಳಸಿ. ಮುಸ್ಸಂಜೆ ವೇಳೆ ಬೇವಿನ ಸೊಪ್ಪಿನ ಹೊಗೆ ಹಾಕಿ  ಬಾಗಿಲು ಕಿಡಿಕಿಗಳಿಗೆ ಜಾಲರಿಗಳನ್ನು ಅಳವಡಿಸಿಕೊಳ್ಳಿ. ಹಗಲು ಮತ್ತು ರಾತ್ರಿ ಮಲಗುವ ಮುನ್ನ ಸೊಳ್ಳೆ ಪರದೆ ಬಳಸಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಸದಸ್ಯರಾದ ಶ್ರೀಮತಿ ವನಜಾಕ್ಷಮ್ಮ. ಗ್ರಾಮ ಪಂಚಾಯತಿ ಕಾರ್ಯದರ್ಶಿಯಾದ ಅಂಜಿನಪ್ಪ. ತಾಲೂಕ್ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಶ್ರೀಮತಿ ಸುಧಾ. ಹಿರಿಯ ಆರೋಗ್ಯ  ನಿರಕ್ಷಣಾಧಿಕಾರಿಯಾದ ಅಧಿಕಾರಿಯ ತಿಪ್ಪೇಸ್ವಾಮಿ. ಆಶಾ ಮೇಲ್ವಿಚಾರಕರಾದ  ಕವಿತಾ. ಇಲಾಖೆಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಗ್ರಾಮಸ್ಥರು ಭಾಗವಹಿಸಿದ್ದರು