ರಾಷ್ಟ್ರೀಯ ಡೆಂಗೀ ದಿನ ಆರೋಗ್ಯದ ಅರಿವು ಕಾರ್ಯಕ್ರಮ

ಯಾದಗಿರಿ : ಮೇ 18 : ರಾಷ್ಟ್ರೀಯ ಡೆಂಗೀ ದಿನ ಕುರಿತು ಆರೋಗ್ಯದ ಅರಿವು ಮೂಡಿಸುವ ಜಾಥಾ ಹಾಗೂ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಎಂದು ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.

 ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ 2023ರ ಮೇ 16 ರಂದು ಇತೀಚ್ಚಿಗೆ ನಡೆದ ಕಾರ್ಯದಲ್ಲಿ ಅವರು ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷದ ಧ್ಯೇಯ ವಾಕ್ಯ" ಎಲ್ಲರ ಸಹಭಾಗಿತ್ವದೊಂದಿಗೆ ಡೆಂಗೇಯನ್ನು ಸೋಲಿಸೋಣ" ಎಂದು ಅವರು ಹೇಳಿದರು.

 ಈ ರೋಗವು ಸೋಂಕಿತ ಈಡೀಸ್ ಈಜಿಪ್ಟೈ ಸೊಳ್ಳೆ ಕಡಿತದಿಂದ ಹರಡುವ ಡೆಂಗೀ ಜ್ವರವು ವೇರಾಣುಗಳಿಂದ ಉಂಟಾಗುತ್ತದೆ. ಡೆಂಗೀ ಜ್ವರದ ಲಕ್ಷಣಗಳು, ತೀವ್ರ ಜ್ವರ, ಮೈ-ಕೈ ನೋವು ಮತ್ತು ಕೀಲು ನೋವು, ತೀವ್ರತರವಾದ ತಲೆನೋವು, -ಹೆಚ್ಚಾಗಿ ಹಣೆ ಮುಂಭಾಗ, ಕಣ್ಣಿನ ಹಿಂಭಾಗದ ನೋವು, ವಾಕರಿಕೆ ಮತ್ತು ವಾಂತಿ, ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು, ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಆಗಿರುತ್ತದೆ ಎಂದು  ಡಾ. ಗುರುರಾಜ ಹೀರೆಗೌಡ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಯಾದಗಿರಿ ಅವರು ತಿಳಿಸಿದರು.

 ಈ ಕಾಂiÀರ್iಕ್ರಮದ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದ ಡಾ ಲಕ್ಷ್ಮಿಕಾಂತ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ಯಾದಗಿರಿ ರವರು ಈ ರೋಗದ ಮುಂಜಾಗ್ರತ ಕ್ರಮಗಳಾದ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೋಳ್ಳುವುದು, ನೀರಿನ ತೊಟ್ಟಿಗಳು, ಡ್ರಮ್, ಬ್ಯಾರಲ್ ಮತ್ತು ಟ್ಯಾಂಕ್‍ಗಳನ್ನು ಕನಿಷ್ಠ ವಾರಕ್ಕೆ ಒಂದು ಬಾರಿ ಸ್ವಚ್ಛಗೊಳಿಸಿ ಭದ್ರವಾಗಿ ಮುಚ್ಚಿಡಬೇಕು, ಹಗಲಲ್ಲಿ ನಿದ್ದೆ ಮಾಡುವ, ವಿಶ್ರಾಂತಿ ಪಡೆಯುವವರು ಸೊಳ್ಳೆ ಪರದೆ ಹಾಗೂ ಸೊಳ್ಳೆ ನಿರೋಧಕಗಳನ್ನು ತಪ್ಪದೇ ಬಳಸಲು ತಿಳಿಸಿದರು.

 ಕೊನೆದಾಗಿ ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿಗಳಾದ ಶ್ರೀ ತುಳಸಿರಾಮ ರವರು ಮಾತನಾಡುತ್ತಾ ಈ ರೋಗ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಯನ್ನು ತಕ್ಷಣ ಸಂಪರ್ಕಿಸಿ, ಉಚಿತ ಚಿಕಿತ್ಸೆ ಪಡೆಯಿರಿ ಈ ಖಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ. ರೋಗ ಲಕ್ಷಣ ಚಿಕಿತ್ಸೆ ನೀಡಲಾಗುವುದು ಉದಾಸೀನತೆ ಮಾಡದಿರಿ ಎಂದು ತಿಳಿಸಿದರು. ಶ್ರೀ ಬಸವರಾಜ ಕಾಂತಾ ರವರು ನಿರೂಪಣೆ ಹಾಗೂ ವಂದನಾರ್ಪಣೆಯನ್ನು ನೆರವೇರಿಸಿದರು.