ರಾಷ್ಟ್ರೀಯ ಟ್ರಾಕ್ ಸೈಕ್ಲಿಂಗ್‍ಃ ಅಂಕಿತಾಗೆ 4 ಪದಕ

ವಿಜಯಪುರ, ಏ.6-ಮಾರ್ಚ್ 27 ರಿಂದ 31ರವರೆಗೆ ಹೈದರಾಬಾದ್ ನಲ್ಲಿ ನಡೆದ 72ನೇ ರಾಷ್ಟ್ರೀಯ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ಶಿಪನಲ್ಲಿ ಕರ್ನಾಟಕ ರಾಜ್ಯದಿಂದ ಪ್ರತಿನಿಧಿಸಿದ ಕುಮಾರಿ ಅಂಕಿತಾ ಮಂಜುನಾಥ ರಾಠೋಡ 1 ಚಿನ್ನ, 1 ಬೆಳ್ಳಿ ಹಾಗೂ 2 ಕಂಚಿನ ಪದಕ ಪಡೆದು ದಾಖಲೆ ನಿರ್ಮಿಸಿದ್ದಾಳೆ. ಇವಳು ವಿ,ಕೆ,ಎಸ್, ಎಮ್, ಎಸ್, ಪಿಯು ಕಾಲೇಜ್ ತಿಡಗುಂದಿ ಕಾಲೇಜಿನಲ್ಲಿ ಪ್ರಥಮ ವರ್ಷ ಕಲಾ ವಿಭಾಗದಲ್ಲಿ ಓದುತ್ತಿದ್ದು ಇವಳು ರಾಜ್ಯ, ಜಿಲ್ಲೆ ಹಾಗೂ ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾಳೆ. ಇವಳ ಸಾಧನೆಯನ್ನು ಮೆಚ್ಚಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಬಸನಗೌಡ ಹರನಾಳ ಹಾಗೂ ಕಾಲೇಜಿನ ಆಡಳಿತ ಮಂಡಳಿ ಹಾಗೂ ಶಿಕ್ಷಕ ವರ್ಗ ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸಿದ್ದಾರೆ