ರಾಷ್ಟ್ರೀಯ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್‍ಗೆ ಆಯ್ಕೆ

ವಿಜಯಪುರ:ಡಿ.27:ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ. 5ನೇ ಸೆಮೆಸ್ಟರ್ ಹಾಗೂ ಎಂ.ಕಾಂ 2ನೇ ಸೆಮೆಸ್ಟರ್‍ನಲ್ಲಿ ವ್ಯಾಸಂಗ ಮಾಡುತ್ತಿರುವ ಕ್ರೀಡಾಪಟುಗಳಾದ ಅಭಿಷೇಕ ಚವ್ಹಾಣ ಹಾಗೂ ಮನೋಹರ ದೊಡಮನಿ ಅವರು ಡಿಸೆಂಬರ 27 ರಿಂದ 30 ರವರೆಗೆ ವಾರಣಾಸಿಯಲ್ಲಿ ಜರುಗುವ 2 ನೇ ಜೂನಿಯರ್ ರಾಷ್ಟ್ರೀಯ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಗೊಂಡಿದ್ದಾರೆ. ಪ್ರಸ್ತುತ ಈ ಇಬ್ಬರು ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಟೆನಿಸ್ ಬಾಲ್ ಕ್ರಿಕೆಟ್ ತಂಡದಲ್ಲಿ ಆಡಲಿದ್ದಾರೆ. ಕಾಲೇಜಿನ ಇಬ್ಬರು ಕ್ರೀಡಾಪಟುಗಳ ಸಾಧನೆಗೆ ಕಾಲೇಜಿನ ಅಭಿವೃದ್ಧಿ ಸಮೀತಿ ಅಧ್ಯಕ್ಷರೂ ಹಾಗೂ ವಿಜಯಪುರ ನಗರದ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಅವರು ಹಾಗೂ ಕಾಲೇಜಿನ ಸಿ,ಡಿ.ಸಿ. ಸದಸ್ಯರು, ಪ್ರಾಂಶುಪಾಲ ಡಾ. ಎ.ಐ.ಹಂಜಗಿ, ಕ್ರೀಡಾ ನಿರ್ದೇಶಕ ಪ್ರೊ. ಸಂಗಮೇಶ ಗುರವ, ಐ.ಕ್ಯೂ.ಎ.ಸಿ ಸಂಚಾಲಕ ಡಾ. ಸಂತೋಷ ಕಬಾಡೆ, ಕ್ರೀಡಾ ಸಮೀತಿಯ ಸದಸ್ಯರಾದ ಪ್ರೊ. ಎಂ.ಎಸ್.ಖೊದ್ನಾಪೂರ, ಡಾ. ರಾಜಶ್ರೀ ಮಾರನೂರ, ಡಾ. ರೋಹಿಣಿ ಹಿರೇಶೆಡ್ಡಿ ಹಾಗೂ ಕಾಲೇಜಿನ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ. ನಮ್ಮ ಕರ್ನಾಟಕ ಕ್ರಿಕೆಟ್ ತಂಡ ಜಯ ಸಾಧಿಸಲೆಂದು ಶುಭ ಹಾರೈಸಿದ್ದಾರೆ.