ರಾಷ್ಟ್ರೀಯ ಜೆರಿಯಾಟ್ರಿಕ್ ಸಂಘದ ಉಪಾಧ್ಯಕ್ಷರಾಗಿ ಡಾ.ಅಂಬಲಿ ಆಯ್ಕೆ

ವಿಜಯಪುರ, ಎ.9-ರಾಷ್ಟ್ರೀಯ ಜೆರಿಯಾಟ್ರಿಕ್ ಸಂಘದ ಉಪಾಧ್ಯಕ್ಷರಾಗಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಪ್ರಾಧ್ಯಾಪಕ, ಬಿ.ಎಂ.ಪಾಟೀಲ್ ವೈದ್ಯಕೀಯ ಕಾಲೇಜು, ಆಸ್ಪತ್ರೆ ಜೆರಿಯಾಟ್ರಿಕ್ ಕ್ಲಿನಿಕ್ ವೈದ್ಯ ಡಾ.ಆನಂದ ಅಂಬಲಿ ಆಯ್ಕೆಯಾಗಿದ್ದಾರೆ.
ವೃದ್ಧರಲ್ಲಿ ಕಂಡುಬರುವ ಕಾಯಿಲೆಗಳು ಹಾಗೂ ಆರೋಗ್ಯ ಸಮಸ್ಯೆಗಳ ನಿರ್ವಹಣಾ ಕೌಶಲ್ಯ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಡಾ.ಅಂಬಲಿ ಅವರು ರಾಷ್ಟ್ರೀಯ ಜೆರಿಯಾಟ್ರಿಕ್ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವದರಿಂದ ಜಿರಿಯಾಟ್ರಿಕ್ (ಹಿರಿಯ ನಾಗರಿಕರ ಆರೋಗ್ಯ) ಕ್ಷೇತ್ರದಲ್ಲಿ ಪರಿಣಾಮಕಾರಿ ಸೇವೆ ಸಿಗಲಿದೆ ಎಂದು ಪ್ರಾಚಾರ್ಯ ಡಾ.ಅರವಿಂದ ಪಾಟೀಲ ಸಂತಸ ವ್ಯಕ್ತಪಡಿಸಿದ್ದಾರೆ.
ಬಿ.ಎಲ್.ಡಿ.ಇ ವಿವಿ ಕುಲಪತಿ, ಮಾಜಿ ಸಚಿವ ಎಂ.ಬಿ.ಪಾಟೀಲ್, ಉಪಕುಲಪತಿ ಡಾ.ಎಂ.ಎಸ್.ಬಿರಾದಾರ, ಸಮಉಪಕುಲಪತಿ ಡಾ.ಆರ್.ಎಸ್.ಮುಧೋಳ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಡಾ.ಆನಂದ ಅಂಬಲಿಯವರಿಗೆ ಅಭಿನಂದಿಸಿದ್ದಾರೆ.