ರಾಷ್ಟ್ರೀಯ ಜುಡೋ ಸ್ಪರ್ಧೆಗೆ ಕೇಂದ್ರೀಯ ವಿಶ್ವವಿದ್ಯಾಲಯದ ಖುಸಿ ತಿವಾರಿ ಆಯ್ಕೆ

ಕಲಬುರಗಿ:ಫೆ.09: ಇತ್ತೀಚೆಗೆ ಪಂಜಾಬ್‍ನ ಗುರು ನಾನಕದೇವ್ ವಿಶ್ವವಿದ್ಯಾಲಯದಲ್ಲಿ ನಡೆದ ದಕ್ಷಿಣ-ವಾಯುವ್ಯ ಅಂತರ ವಿಶ್ವ ವಿದ್ಯಾಲಯಗಳ ಜುಡೋ ಸ್ಪರ್ಧೆಯಲ್ಲಿ 57 ಕೆಜಿ ವಿಭಾಗದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಜೀವಶಾಸ್ತ್ರ ವಿಭಾಗದ ಖುಸಿ ತಿವಾರಿ ಅವರು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇದೆ ಮೊದಲ ಬಾರಿಗೆ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬರು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ್, ಕುಲಸಚಿವ ಪೆÇ್ರ. ಆರ್ ಆರ್ ಬಿರಾದಾರ್, ಕ್ರಿಡಾ ವಿಭಾಗದ ನಿರ್ದೇಶಕ ಪೆÇ್ರ. ಎಮ್. ಎಸ್. ಪಾಸೋಡಿ, ಕ್ರೀಡಾ ವಿಭಾಗದ ಸಂಯೋಜಕ ಸಾಯಿ ಅಭಿನವ ಅವರು ಹರ್ಷವ್ಯಕ್ತ ಪಡಿಸಿದ್ದಾರೆ.
ಪೆÇ್ರ. ಎಮ್. ಎಸ್. ಪಾಸೊಡಿ ಅವರು ಮಾತನಾಡಿ, ಇಂದಿನಿಂದ ಗುರುನಾನಕದೇವ್ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಖುಸಿ ತಿವಾರಿ ಅವರು ಭಾಗವಹಿಸಲಿದ್ದು, ಪದಕ ಗೆಲ್ಲುವ ಸಾಧ್ಯತೆಯಿದೆ. ಅವಳಿಗೆ ಶುಭ ಹಾರೈಸುತ್ತೇವೆ ಎಂದು ಹೇಳಿದರು.