ರಾಷ್ಟ್ರೀಯ ಜನಜಾಗೃತಿ ಸಮಾರಂಭದ ಪ್ರಚಾರ ರಥಕ್ಕೆ ಚಾಲನೆ

ತಾಳಿಕೋಟೆ:ಜು.25: ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರ ದ್ವಾದಶ ಪೀಠಾರೋಹಣ ಹಾಗೂ ಜನ್ಮ ಸುವರ್ಣ ಮಹೋತ್ಸವ ಅಂಗವಾಗಿ ಶ್ರೀಕ್ಷೇತ್ರ ಶ್ರೀಶೈಲದಲ್ಲಿ ಜರುಗುವ ರಾಷ್ಟ್ರೀಯ ಜನಜಾಗೃತಿ ಸಮಾರಂಭದ ಚಿಂತನೆ ಕುರಿತು ಇದೇ ದಿ. 27 ಬುಧವಾರರಂದು ಬೆಳಿಗ್ಗೆ 10 ಗಂಟೆಗೆ ಸ್ಥಳೀಯ ಶ್ರೀ ಸಂಗಮೇಶ್ವರ ಸಭಾ ಭವನದಲ್ಲಿ ಜರುಗಲಿರುವ ಈ ಸುವರ್ಣ ಮಹೋತ್ಸವ ಹಾಗೂ ದ್ವಾದಶ ಪೀಠಾರೋಹಣದ ಕುರಿತು ಈ ಪೂರ್ವಭಾವಿ ಸಭೆಯ ಪ್ರಚಾರಾರ್ಥವಾಗಿ ಪ್ರಚಾರ ರಥಕ್ಕೆ ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ರವಿವಾರರಂದು ಚಾಲನೆ ನೀಡಿದರು.

    ಈ ಸಮಯದಲ್ಲಿ ಮಾತನಾಡಿದ ಅವರು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು ಪೀಠದ ಕರ್ಣದಾರತ್ವವನ್ನು ವಹಿಸಿಕೊಂಡು ಕಳೆದ ಫೇಬ್ರವರಿ 8-2022 ನೇ ಸಾಲಿಗೆ 12 ವರ್ಷಗಳು ಪೂರ್ಣಗೊಂಡಿವೆ ಮತ್ತು ಜಗದ್ಗುರುಗಳಿಗೆ 50 ವರ್ಷ ಪೂರ್ಣಗೊಳ್ಳುತ್ತವೆ ಶ್ರೀಕ್ಷೇತ್ರ ಯಡಿಯೂರದಿಂದ 29-10-2022ರಿಂದ ಶ್ರೀ ಕ್ಷೇತ್ರ ಶ್ರೀಶೈಲದ ವರೆಗೆ ನವ್ಹೇಂಬರ್ 30-2022ರವರೆಗೆ ಲೋಕ ಕಲ್ಯಾಣಾರ್ಥವಾಗಿ ಜಗದ್ಗುರುಗಳು ಪಾದಯಾತ್ರೆ ಕೈಕೊಳ್ಳಲಿದ್ದಾರೆ ಈ ಎಲ್ಲ ಕಾರ್ಯಕ್ರಮಗಳ ಕುರಿತು ಜನ ಜಾಗೃತಿ ಮೂಡಿಸುವ ಕುರಿತು ಸಭೆಯನ್ನು ಕರೆಯಲಾಗಿದ್ದು 27 ರವರೆಗೆ ಈ ಪ್ರಚಾರ ರಥ ಸುಮಾರು 50 ಕ್ಕೂ ಅಧಿಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಿ ಪ್ರಚಾರ ಕೈಗೊಳ್ಳಲಿದೆ ಎಂದರು.

ಈ ಸಮಯದಲ್ಲಿ ಹಿರಿಯರಾದ ಎಂ.ಜಿ.ಪಾಟೀಲ(ಗುಂಡಕನಾಳ), ಸಂಗನಗೌಡ ಅಸ್ಕಿ, ಕಡಕೋಳ ಶಿಕ್ಷಕರು, ಶಾಂತಗೌq ಕೇಸರಭಾವಿ, ಕಿರಣ ಬಡಿಗೇರ, ರಾಘವೇಂದ್ರ ಬಿಜಾಪುರ, ಘಜದಂಡಯ್ಯ ಹಿರೇಮಠ, ಕಾಶಿನಾಥ ಅರಳಿಚಂಡಿ, ಸಂಗನಗೌಡ ಪಾಟೀಲ, ಮೊದಲಾದವರು ಇದ್ದರು.