
ಸಿರವಾರ,ಮಾ.೧೮- ಅಲ್ಬೆಂಡೋಝನ್ ಮಾತ್ರೆಗಳನ್ನು ಸೇವನೆ ಮಾಡುವ ಮೂಲಕ ಜಂತುಹುಳುಗಳನ್ನು ನಿವಾರಣೆ ಮಾಡಿ ಆರೋಗ್ಯದಿಂದ ಇರಬೇಕು ಎಂದು ಸಿರವಾರ ಪ್ರಾಥಮಿಕ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀದೇವಿ ಹೇಳಿದರು.
ತಾಲೂಕಿನ ಗಣದಿನ್ನಿ ಉಪಕೇಂದ್ರದ ಶಾಖಾಪೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ೧ ವರ್ಷದಿಂದ ೧೯ ವರ್ಷದೊಳಗಿನ ಮಕ್ಕಳಿಗೆ ಮಾತ್ರೆ ವಿತರಣೆ ಮಾಡಿ ರೋಗದ ಬಗ್ಗೆ ಮಾಹಿತಿ ನೀಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ನಿರೀಕ್ಷಣಾದಿಕಾರಿ ಸಿದ್ದಮ್ಮ, ಅಂಗನವಾಡಿ ಕಾರ್ಯಕರ್ತೆ ಸಿದ್ದಮ್ಮ, ಶಂಕ್ರಮ, ಲಕ್ಷ್ಮೀ ಸೇರಿದಂತೆ ಇನ್ನಿತರರು ಇದ್ದರು.