ರಾಷ್ಟ್ರೀಯ ಜಂತುಹುಳ ನಿವಾರಕ ದಿನಾಚರಣೆಗೆ ಚಾಲನೆ

ಬೀದರ, ಮಾ. 14: ಮಾರ್ಚ್ 13 ರಿಂದ 25 ರವರೆಗೆ ಜರುಗುವ ರಾಷ್ಟ್ರೀಯ ಜಂತುಹುಳ ನಿವಾರಕ ದಿನಾಚರಣೆಯನ್ನು ಜಿಲ್ಲಾ ಪಂಚಾಯತ ಬೀದರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಬೀದರ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಬಿದ್ರಿ ರವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಜಯಪ್ರಕಾಶ ನಾರಯಣ ಪ್ರಾಥಮಿಕ ಶಾಲೆ ವಿದ್ಯಾನಗರ ಬೀದರನಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ರತಿಕಾಂತ ಸ್ವಾಮಿ ಅವರು ಮಕ್ಕಳಿಗೆ ಅಲ್ಬೆಂಡೋಜಲ್ ಮಾತ್ರೆ ವಿತರಿಸುವ ಮೂಲಕ ಜಂತುಹುಳು ನಿವಾರಣೆ ದಿನಾಚರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು 1 ವರ್ಷದಿಂದ 19 ವರ್ಷದ ಎಲ್ಲಾ ಮಕ್ಕಳಿಗೆ ಅಲ್ಬೆಂಡೋಜಲ್ ಮಾತ್ರೆಯನ್ನು ವಿತರಿಸಲಾಗುತ್ತಿದ್ದು, ಈ ಮಾತ್ರೆಯನ್ನು ಪ್ರತಿಯೊಬ್ಬ ಮಕ್ಕಳು ಚೀಪಿಸಿ ದೇಹದಲ್ಲಿರುವ ಪೋಷಕಾಂಶ ಹಾನಿಕಾರಕ ಜಂತುಹುಳುವನ್ನು ನಾಶ ಮಾಡಬೇಕೆಂದು ಕರೆ ನೀಡಿದರು. ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಯು ಜಂಟಿಯಾಗಿ ಎಲ್ಲಾ ಮಕ್ಕಳಿಗೆ ಅಲ್ಬೆಂಡೋಜಲ್ ಮಾತ್ರೆ ಚೀಪಿಸಲು ವಿತರಿಸುವುದು. ಈ ಕಾರ್ಯಕ್ರಮವು ಜಿಲ್ಲೆಯಲ್ಲಿ ಪ್ರತಿಶತ 100 ಕ್ಕೆ 100ರಷ್ಟಯ ಯಶಸ್ವಿಯಾಗಬೇಕೆಂದು ಹಾರೈಸಿದಿರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ರಾಜಶೇಖರ ಪಾಟೀಲ್ ಅವರು ಮಾತನಾಡಿ ಮಾರ್ಚ್ 13 ರಿಂದ 265 ರವರೆಗೆ ಜರುಗಲಿದ್ದು, ಆರೋಗ್ಯ ಇಲಾಖೆಯ ಕ್ಷೇತ್ರ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕತೆಯರು, ಆಶಾ ಕಾರ್ಯಕರ್ತೆಯರು ಹಾಗೂ ವಿವಿಧ ಶಾಲೆಯ ಶಿಕ್ಷಕರು ಅಲ್ಬೆಂಡೋಜಲ್ ಮಾತ್ರೆಯನ್ನು ಮಕ್ಕಳಿಗೆ ನೀಡಿ ಚೀಪಿಸಲು ಕರೆ ನೀಡಿದರು. 1 ವರ್ಷದಿಂದ 19 ವರ್ಷದ ಎಲ್ಲಾ ಮಕ್ಕಳಿಗೆ ಈ ಮಾತ್ರೆ ವಿತರಿಸಬೇಕು. 1 ರಿಂದ 2 ವರ್ಷದ ಮಕ್ಕಳಿಗೆ ಅರ್ಧ ಅಲ್ಬೆಂಡೋಜಲ್ ಮಾತ್ರೆ ಹಾಗೂ 2 ರಿಂದ 19 ವರ್ಷದ ಮಕ್ಕಳಿಗೆ ಒಂದು ಅಲ್ಬೆಂಡೋಜಲ್ ಮಾತ್ರೆ ಚೀಪಿಸಲು ನೀಡಬೇಕು. ಈ ಮಾತ್ರೆಯಿಂದ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ. ಆದ್ದರಿಂದ ಎಲ್ಲಾ ಮಕ್ಕಳಿಗೆ ಅಲ್ಬೆಂಡೋಜಲ್ ಮಾತ್ರೆ ವಿತರಿಸುವುದರ ಮೂಲಕ ಜಂತುಹುಳು ನಿವಾರಣೆಗೆ ಕ್ರಮಕೈಕೊಳ್ಳಲು ಕೇಳಿಕೊಂಡರು. ಹಾಜರಿದ್ದ ಎಲ್ಲಾ ಮಕ್ಕಳು ಅಲ್ಬೆಂಡೋಜಲ್ ಮಾತ್ರೆ ಚೀಪಿಸಿ ಕಾರ್ಯಕ್ರಮಕ್ಕೆ ನಾಂದಿಹಾಡಿದರು.

ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ. ಸಂಗಾರೆಡ್ಡಿ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಉಮೇಶ ಬಿರಾದರ, ವೈದ್ಯಾಧಿಕಾರಿಗಳು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಡಾ. ಸತೀಶ್ ಜಿಲ್ಲಾ ಎನ್.ಡಿ.ಡಿ ಸಂಯೋಜಕರು ಪುಟ್ಟರಾಜ, ತಾಲೂಕ ಆರೋಗ್ಯ ಶಿಕ್ಷಣಾ ಅಧಿಕಾರಿ ಓಂಕಾರ, ಜಯಪ್ರಕಾಶ ನಾರಾಯಣ ಪ್ರಾಥಮಿಕ ಶಾಲೆ ಮುಖ್ಯ ಗುರುಗಳು ಜಯಪ್ರಕಾಶ ನಾರಾಯಣ, ಶಕುಂತಲಾ ನಗರ ಎಲ್.ಹೆಚ್.ವಿ ಅಶೋಕ, ವಿನಾಯಕ ಸಾಗರ ಹಾಗೂ ಸಿಬ್ಬಂದಿಯವರು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.