ರಾಷ್ಟ್ರೀಯ ಜಂತುಹುಳು ನಿವಾರಣೆ ಕಾರ್ಯಕ್ರಮ


ಬಾಗಲಕೋಟೆ: ಡಿ 1 : ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರು ವತಿಯಿಂದ ತಾಲೂಕಿನ ಬೆನಕಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಜಂತು ಹುಳು ನಿವಾರಣೆ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್. ಎಸ್. ಅಂಗಡಿ ಜಂತು ಹುಳು ರಹಿತ ಮಕ್ಕಳು ಆರೋಗ್ಯವಂತ ಮಕ್ಕಳು ಎಂಬ ಘೋಷವಾಕ್ಯಯೊಂದಿಗೆ ಅಲ್ ಬೆಂಡಾಜೋಲ್ ಮಾತ್ರೆ ವಿತರಿಸಿದರು. ಜಂತು ಹುಳು ನಿವಾರಣೆ ಜಂತು ಹುಳು ಮಕ್ಕಳಲ್ಲಿ ಪೆÇೀಷಕಾಂಶಗಳ ಕೊರತೆ, ರಕ್ತ ಹೀನತೆ ಉಂಟಾಗುತ್ತದೆ ಮುಂಜಾಗ್ರತೆ ಕ್ರಮಗಳಾದ ಊಟಕ್ಕೆ ಮುಂಚೆ ಕೈಕಾಲುಗಳನ್ನು ತೊಳೆಯುವುದು, ತರಕಾರಿ ಹಣ್ಣು ಹಂಪಲು ಚೆನ್ನಾಗಿ ತೊಳೆದು ಉಪಯೋಗಿಸುವುದು, ಶುದ್ಧ ನೀರು ಕುಡಿಯುವುದು, ಪಾದರಕ್ಷೆಗಳನ್ನು ಉಪಯೋಗಿಸುವುದು, ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳವುದು, ಮಕ್ಕಳು ಪೆÇೀಷಕಾಂಶಯುಕ್ತ ಆಹಾರ ಸೇವನೆ ಮಾಡುವುದು, ಸಮತೋಲನ ಆಹಾರ ಸೇವನೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಎಸ್. ಬಿ. ಮುದೇನೂರು, ಶಿಕ್ಷಕರಾದ ಎ. ಎಸ್. ಮಂತ್ರಿ, ಆರ್. ಎಸ್. ಅಬ್ಬಿಗೇರಿ, ಶಿಕ್ಷಕರಾದ ಜಿ. ಜಿ. ಕೊಣ್ಣೂರ, ಪಿ. ಆರ್. ಸಣ್ಣಪ್ಪನ್ನವರ, ಡಾ. ಪಿ. ಡಿ. ಸರಿಕರ, ಆರ್. ಬಿ. ಕೆಂಚನ್ನವರ, ಟಿ. ವಾಯ್. ಕೊಲಕಾರ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಗೋಪಮ್ಮ ತಳವಾರ, ಸಮೂದಾಯ ಆರೋಗ್ಯ ಅಧಿಕಾರಿ ಲಕ್ಷ್ಮೀ ಆರ್. ಮೇಟಿ, ಆಶಾ ತಾಯವ್ವ ಮಾದರ, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.