ರಾಷ್ಟ್ರೀಯ ಚಾಂಪಿಯನ್ ಗಳಾದ ಕರ್ನಾಟಕದ ಮಹಿಳಾ, ಪುರುಷರ ತಂಡಗಳು


ಸಂಜೆವಾಣಿ ವಾರ್ತೆ
ಸಂಡೂರು :ಫೆ:6:  ಬೆಂಗಳೂರಿನ ಗಾಂಧಿಭವನದಲ್ಲಿ ರಾಕಿಟ್ ಬಾಲ್ ಅಸೋಷಿಯೇಷನ್ ಅಫ್ ಕರ್ನಾಟಕ ಮತ್ತು ಬಿಕೆಜಿ ಫೌಂಡೇಷನ್ ಸಂಡೂರು ಇವರ ಸಂಯುಕ್ತಾಶ್ರಯದಲ್ಲಿ ಕೊಲ್ಕತ್ತಾದ ಶ್ಯಾಮ್‍ಸಾಗರ್‍ನಲ್ಲಿ ನಡೆದ 10ನೇ ಹಿರಿಯರ ರಾಷ್ಟ್ರೀಯ ಬಾಲ್ ಚಾಂಪಿಯನ್ ಶಿಫ್ 2023-24ರ ಪಂದ್ಯಾವಳಿಯಲ್ಲಿ ರಾಷ್ಟ್ರೀಯ ಚಾಂಪಿಯನ್ ಗಳಾದ ಕರ್ನಾಟಕದ ಮಹಿಳಾ ಹಾಗೂ ಪುರುಷರ ತಂಡದ ಅಟಗಾರರಿಗೆ ಅಭಿನಂದಿಸುವ ಮೂಲಕ ಅವರಿಗೆ ಇನ್ನೂ ಉತ್ತಮ ಪ್ರದರ್ಶನವನ್ನು ಮಾಡಬೇಕು ಎನ್ನುವ ಹಂಬಲವನ್ನು ಕರ್ನಾಟಕ ರಾಕೀಟ್ ಬಾಲ್ ಅಸೋಷಿಯೇಷನ್ ಹೊಂದಿದೆ ಎಂದು ರಾಜ್ಯಾಧ್ಯಕ್ಷ ಬಿ.ನಾಗನಗೌಡ ತಿಳಿಸಿದರು.
ಅವರು ಉತ್ತಮ ಪ್ರದರ್ಶನವನ್ನು ನೀಡುವ ಮೂಲಕ ಕೊಲ್ಕತ್ತಾದಲ್ಲಿ ಸಾಧನೆಯನ್ನು ಮಾಡಿ ಇಂದು ರಾಜ್ಯದ ಕೀರ್ತಿಯನ್ನು, ಸಂಡೂರಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ರಾಕಿಟ್ ಬಾಲ್ ಅಸೋಷಿಯೇಷನ್ ಆಫ್ ಇಂಡಿಯಾದ ಜನರಲ್ ಸೆಕ್ರೇಟರಿ ಬಾಲವಿಂಧರ್ ಸಿಂಗ್ ಹಾಗೂ ಕರ್ನಾಟಕ ರಾಜ್ಯದ ಅಧ್ಯಕ್ಷರಾದ ಬಿ.ನಾಗನಗೌಡ ಅವರು ಆಟಗಾರರಿ ವಿಶೇಷ ಸನ್ಮಾನವನ್ನು ಮಾಡುವ ಮೂಲಕ ಗೌರವಿಸಿದರು.