ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ವಾಣಿಜ್ಯ ಮಂಡಳಿಯಿಂದ ಸನ್ಮಾನ

ಬೆಂಗಳೂರು, ಜು.25- 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಕನ್ನಡದ ಕೀರ್ತಿಯ ಬಾವುಟ ಹಾರಿಸಿದ ಚಿತ್ರಗಳಿಗೆ ವಾಣಿಜ್ಯ ಮಂಡಳಿ ವತಿಯಿಂದ ನಗರದಲ್ಲಿ ಸನ್ಮಾನಿಸಲಾಯಿತು.

ಡೊಳ್ಳು ಸಿನಿಮಾ ನಿರ್ಮಾಪಕರಾದ ಪವನ್ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್ ದಂಪತಿ, ಚಿತ್ರದ ನಿರ್ದೇಶಕ ಸಾಗರ್ ಪುರಾಣಿಕ್ ಹಾಗೂ ‘ತಲೆದಂಡ’ ಚಿತ್ರದ ನಿರ್ಮಾಪಕಿ ಡಾ. ಹೇಮಾಮಾಲಿನಿ ಕೃಪಾಕರ್ ಸೇರಿದಂತೆ ಈ ಬಾರಿ ಪ್ರಶಸ್ತಿ ವಿಜೇತರಿಗೆ ವಾಣಿಜ್ಯ ಮಂಡಳಿ ಸನ್ಮಾನಿಸಿತು.

ಮಂಡಳಿಯ ಅಧ್ಯಕ್ಷ ಭಾ.ಮಾ.ಹರೀಶ್ ಸನ್ಮಾನ ಮಾಡಿ ಕನ್ನಡ ಚಿತ್ರಗಳು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ದೇಶ ವಿದೇಶದಲ್ಲಿ ಕನ್ನಡ ಕೀರ್ತಿ ಪತಾಕೆ ಹಾರಿಸಿ ಎಂದು ಪ್ರಶಸ್ತಿ ವಿಜೇತರ ಕೆಲಸವನ್ನು ಗುಣಗಾನ ಮಾಡಿದರು.

ಈ ಸಂದರ್ಭದಲ್ಲಿ ಮಂಡಳಿ ಮಾಜಿ ಎಸ್. ಎ ಚಿನ್ನೇಗೌಡ , ಮಂಡಳಿಯ ಪದಾಧಿಕಾರಿಗಳಾದ ಜೈ ಜಗದೀಶ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

ವಿಶಿಷ್ಟ ಕಥಾಹಂದರದ ‘ಡೊಳ್ಳು’ ಸಿನಿಮಾಗೆ ಅತ್ಯುತ್ತಮ ಕನ್ನಡ ಪ್ರಾದೇಶಿಕ ಸಿನಿಮಾ ಹಾಗೂ ಸಿಂಕ್ ಸೌಂಡ್ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ದೊರೆತಿದೆ. ‘ತಲೆದಂಡ’ ಚಿತ್ರಕ್ಕೆ ಪರಿಸರ ಕಾಳಜಿ ಕಥಾವಸ್ತುವುಳ್ಳ ರಾಷ್ಟ್ರ ಪ್ರಶಸ್ತಿಯ ಗರಿ ಒಲಿದಿದೆ. ‘ಅತ್ಯುತ್ತಮ ಕಲೆ ಹಾಗೂ ಸಾಂಸ್ಕೃತಿಕ ಸಿನಿಮಾ’ ವಿಭಾಗದಲ್ಲಿ ಗಿರೀಶ್ಕಾಸರವಳ್ಳಿ ನಿರ್ದೇಶನದ ‘ನಾದದ ನವನೀತ’ ಚಿತ್ರ ಪ್ರಶಸ್ತಿಗೆ ಭಾಜನವಾಗಿದ್ದು, ಇದು ಕನ್ನಡಿಗರಿಗೆ ಹೆಮ್ಮಯ ಸಂಗತಿ