ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಅವ್ಯವಹಾರ

ಕಾಳಗಿ.ಮಾ.26: ತಾಲೂಕಿನ ಹೊಡೆಭೀರನಳ್ಳಿ 2020-21ನೇ ಸಾಲಿನಲ್ಲಿ ಚಿಂಚೋಳಿ ತಾಲೂಕಿನ ವಲಯ ಅರಣ್ಯಾಧಿಕಾರಿಯಾದ ಶ್ರೀ ಗುಂಡಪ್ಪ RFO ಖಾತ್ರಿ ಯೋಜನೆಯಡಿ ಅವ್ಯವಹಾರ ನಡೆಸಿದ್ದು, ನಗದು ರೂ.50,000/-. ಸಾವಿರ ಕೊಟ್ಟವರಿಗೆ ಮಾತ್ರ ಅಂದಾಜು ಪತ್ರಿಕೆಗಳನ್ನು ತಮ್ಮ ಮಧ್ಯವರ್ತಿಗಳ ಮೂಲಕ ಹಣ ಪಡೆದುಕೊಂಡು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಹೊಡೆಭೀರನಳ್ಳಿ ಗ್ರಾಪಂ.ಅಧ್ಯಕ್ಷೆ ಸಂಗೀತಾ ವಿ.ಓಂಕಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಪಂ. ವ್ಯಾಪ್ತಿಯಲ್ಲಿ ಬರುವ ಗೋಮಾಳ ಜಮಿನುಗಳಲ್ಲಿ ಮಧ್ಯವರ್ತಿಗಳ ಸಹಕಾರ ಪಡೆದುಕೊಂಡು ಕಾರ್ಮಿಕರಿಗೆ ಕೆಲಸ ನೀಡದೆ. ಮಧ್ಯವರ್ತಿಗಳ ಮೂಲಕ ಸರ್ಕಾರದ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅವ್ಯವಹಾರದ ಬಗ್ಗೆ ಸರ್ಕಾರ ದ ಗಮನಕ್ಕೆ ತಂದು ನಿಜವಾದ ಕಾರ್ಮಿಕರಿಗೆ ನ್ಯಾಯವದಗಿ ಸುವುದಾಗಿ ತಿಳಿಸಿದರು.
ಮೇಲಾಧಿಕಾರಿಗಳು ಎಚ್ಚೆತ್ತು ಕೊಂಡು ಕೂಲಿಕಾರರನ್ನು ಸಂಪರ್ಕಿಸಿ, ಕೆಲಸ ನಿರ್ವಹಿಸಿರುವ ಮಾಹಿತಿ ಖಚಿತಪಡಿಸಿಕೊಂಡು ಕುಲಂಕುಶವಾಗಿ ಪರಿಶಿಲಿಸಿ, ಭ್ರಷ್ಟ ಅಧಿಕಾರಿಯನ್ನು ಸೇವೆಯಿಂದ ಅಮಾನತ್ತು ಮಾಡುವಂತೆ ಒತ್ತಾಯಿಸಿದ್ದಾರೆ.