ರಾಷ್ಟ್ರೀಯ ಗಾನ ಕೋಗಿಲೆ ರತ್ನ ಪ್ರಶಸ್ತಿ


ರಾಣೇಬೆನ್ನೂರು, ಮಾ.28: ಸಂಗೀತ ಕ್ಷೇತ್ರದಲ್ಲಿನ ಅಮೂಲ್ಯ ಸೇವೆಯನ್ನು ಸಲ್ಲಿಸಿದ ಗಾಯಕಿ ವೀಣಾ ಬೋಸ್ಲೆ ಅವರು ರಾಷ್ಟ್ರೀಯ ಗಾನ ಕೋಗಿಲೆ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಸಮಾಜಮುಖಿ ಸೇವಾ ಸಂಸ್ಥೆ ಮತ್ತು ಶ್ರೀ ಗುರು ಸೋಮಲಿಂಗೇಶ್ವರ ಸಾಂಸ್ಕøತಿಕ ಕಲಾ ಸಂಘ ಇವರುಗಳು ಪ.ಪೂ ಶ್ರೀ ಸಿದ್ದೇಶ್ವರ ಮಹಾಸ್ವಾಮಿಜಿಯವರಿಗೆ ನುಡಿ ನಮನ ಹಾಗೂ ಕರ್ನಾಟಕ ರತ್ನ ಡಾ|| ಪುನೀತ ರಾಜಕುಮಾರ ಸ್ಮರಣಾರ್ಥ 2023-2024 ನೇ ಸಾಲಿಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೀಡಿದ ಸನ್ಮಾನ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದರು.
ಈ ಮೊದಲು ಹಾನಗಲ್‍ನ ಕೊಡಿಹಳ್ಳಿ ಪ್ರತಿಷ್ಠಾನದಿಂದ ಸಪ್ತ ಸ್ವರ ಗಾಯಕಿ ಪ್ರಶಸ್ತಿ, ದ್ಯಾಮವ್ವ ಗ್ರಾಮದೇವತೆ ಟ್ರಸ್ಟ ತಿಳುವಳ್ಳಿ ಇವರಿಂದ ದಶಭಾಷಾ ಗಾಯಕಿ ಪ್ರಶಸ್ತಿ, ಗಂಗೂಬಾಯಿ ಹಾನಗಲ್ ರಾಜ್ಯ ಪ್ರಶಸ್ತಿ, ಜ್ಯೂನಿಯರ್ ಎಸ್ ಜಾನಕಿ ಪ್ರಶಸ್ತಿ, ಗಾನ ರತ್ನ ಪ್ರಶಸ್ತಿ, ಸಂಗೀತ ರತ್ನ ರಾಜ್ಯ ಪ್ರಶಸ್ತಿ, ಸಾಧನ ಸಿರಿ ರತ್ನ ಪ್ರಶಸ್ತಿ, ವೃತ್ತಿ ಚೈತನ್ಯ ಸಿರಿ ಪ್ರಶಸ್ತಿ, ವೀರಾಗ್ರಣಿ ರಾಜ್ಯ ಪ್ರಶಸ್ತಿ ಸೇರಿದಂತೆ ಹತ್ತು ಹಲವಾರು ರಾಜ್ಯ ಪ್ರಶಸ್ತಿ ಪಡೆದಿರುತ್ತಾರೆ.