ರಾಷ್ಟ್ರೀಯ ಕ್ಷಯರೋಗ ಮುಕ್ತ ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜೂ.30: ನಗರದ ತಾಲೂಕು ಪಂಚಾಯತಿ ಆವರಣದಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಪಿ.ಡಿ.ಒಗಳಿಗೆ ರಾಷ್ಟ್ರೀಯ ಕ್ಷಯರೋಗ ಮುಕ್ತ ಹಾಗೂ ರಾಷ್ಟ್ರೀಯ ಪೌಷ್ಟಿಕ ಸಪ್ತಾಹ ಕಾರ್ಯಕ್ರಮವನ್ನು ತಾ.ಪಂ ಮುಖ್ಯ ಅಧಿಕಾರಿ ಮಡಗಿನ ಬಸಪ್ಪ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.
ಹಳ್ಳಿಯಿಂದ ನಗರದ ವರೆಗೆ ಕ್ಷಯರೋಗ ನಿರ್ಮೂಲನೆಗೆ ನಾವೆಲ್ಲರೂ ಶ್ರಮಿಸಬೇಕಾಗಿದೆ ನಮ್ಮ ತಾಲೂಕಿನಲ್ಲಿ 200 ಜನ ಕ್ಷಯರೋಗ ದಿಂದ ಬಳಲುತಿದ್ದು ಅವರಿಗೆ ಸೂಕ್ತ ಚಿಕಿತ್ಸೆಯನ್ನು ನಮ್ಮ ತಾಲೂಕು ವ್ಯೆದ್ಯಾಧಿಕಾರಿಗಳು ನೀಡುತ್ತಿದ್ದಾರೆ ಅದ್ದರಿಂದ ಟಿ.ವಿ ಕಾಯಿಲೆಗೆ ಯಾವುದೇ ಸಾರ್ವಜನಿಕರು ಎದರುವ ಅವಶ್ಯಕತೆ ಇಲ್ಲ ಈ ಕಾಯಿಲೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾದ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತದೆ ಇದ್ದರಿಂದ ತಾಲ್ಲೂಕಿನ ಎಲ್ಲಾ ಗ್ರಾಮ ಅಧಿಕಾರಿಗಳು ತಮ್ಮ ಗ್ರಾಮಗಳಲ್ಲಿ ಈ ಕ್ಷಯರೋಗದ ಬಗ್ಗೆ ಎಚ್ಚರಿಕೆಯನ್ನು ನೀಡಬೇಕು ಅಂತಹ ವ್ಯಕ್ತಿಗಳನ್ನು ಆಸ್ಪತ್ರೆಗೆ ಕಳುಹಿಸಿಕೊಡವ ಕೆಲಸವನ್ನು ಎಲ್ಲರು ನಿರ್ವಹಿಸಬೇಕು ಎಂದು ತಾಲೂಕು ವ್ಯೆದ್ಯಾಧಿಕಾರಿ ಈರಣ್ಣ ತಿಳಿಸಿದರು.
   ಎ.ಇ.ಒ ಬಸವರಾಜ, ಆರೋಗ್ಯ ಶಿಕ್ಷಣ ಅಧಿಕಾರಿ ಖಾಸಿಂ,ಜಿಲ್ಲಾ ಕ್ಷಯರೋಗ ಹಿರಿಯ ಆರೋಗ್ಯ ಶಿರಕ್ಷ ಅಧಿಕಾರಿ ಪಂಪಪಾತಿ ಹಾಗೂ ಉದಯಕುಮಾರ್, ತಾಲೂಕು ಕ್ಷಯರೋಗ ಅಧಿಕಾರಿ ಅಂದನಪ್ಪ ಅಬ್ಬಿಗೇರಿ ಹಾಗೂ ಹುಲುಗಪ್ಪ ಮತ್ತು ಎಲ್ಲಾ ಪ್ರಾಥಮಿಕ ಆರೋಗ್ಯ ವ್ಯೆದ್ಯಾಧಿಕಾರಿಗಳು ಮತ್ತು ಪಿ.ಡಿ.ಒಗಳು ಇದ್ದರು.