ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ರಸ್ತೆ ಓಟ.     

    

ಸಂಜೆವಾಣಿ ವಾರ್ತೆ

ದಾವಣಗೆರೆ.ಆ.೨೫; ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ವಿವಿಧ ಕ್ರೀಡೆಗಳನ್ನು ಆಯೋಜಿಸಿದ್ದು ಇಂದು ಬೆಳಗ್ಗೆ ರಸ್ತೆ ಓಟವನ್ನು ಪುರುಷರಿಗಾಗಿ 6 ಕಿಮೀ ಮಹಿಳೆಯರಿಗಾಗಿ 3 ಕಿ.ಮೀ ನಡೆಸಿದ್ದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಸಹಾಯಕ ನಿರ್ದೇಶಕ ಹರ್ಷ ಅವರು ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಬ್ಬಡ್ಡಿ ತರಬೇತುದರಾದ ಶ್ರೀಶೈಲ  ಖೋಖೋ ತರಬೇತುದಾರರಾದ ಎಂ. ರಾಮಲಿಂಗಪ್ಪ. ಮಹಿಳಾ ತರಬೇತುದಾರರಾದ ಎಂ ಸಿ ಸುನೀತ. ಕುಸ್ತಿ  ತರಬೇತುದಾರರಾದ ವಿನೋದ್ ಕುಮಾರ್ ಕೆ. ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎನ್. ಕೆ. ಕೊಟ್ರೇಶ್.  ಸಿಬ್ಬಂದಿಗಳಾದ ಸೈಯದ್ ಭಾಷಾ, ಅಶೋಕ್, ಪರಶುರಾಮ್ ಮತ್ತು ಹಿರಿಯ ಕ್ರೀಡಾಪಟುಗಳು. ಕ್ರೀಡಾ ಅಭಿಮಾನಿಗಳು. ಇನ್ನು ಮುಂತಾದವರು ಉಪಸ್ಥಿತರಿದ್ದರು.           .