ರಾಷ್ಟ್ರೀಯ ಕ್ರೀಡಾಕೂಟಕ್ಕೆ ಕ್ಷಣಗಣನೆ


 ಸಂಜೆವಾಣಿ ವಾರ್ತೆ
ಹೊಸಪೇಟೆ ಜು28: ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ತನ್ನ ಬೆಳ್ಳಿ ಹಬ್ಬದ ಪ್ರಯುಕ ್ತಜಂಪ್‍ರೋಪ್ ಫೆಡರೇಷನ್ ಆಪ್ ಇಂಡಿಯಾ, ಜಂಪ್‍ರೋಪ್ ಅಸೋಶಿಯೇಷನ್ ಆಫ್ ಕರ್ನಾಟಕ ಇವರ ಸಹಯೋಗದಲ್ಲಿ ಜುಲೈ 29, 30 ಮತ್ತು 31 ರಂದು 19ನೇ ರಾಷ್ಟ್ರೀಯ ಸಬ್-ಜ್ಯೂನಿಯರ್ ಜಂಪ್‍ರೋಪ್ ಚಾಂಪಿಯನ್ ಶಿಫ್, 18ನೇ ರಾಷ್ಟ್ರೀಯ ಫೆಡರೇಷನ್ ಕಫ್ ಹಾಗೂ 36 ಗಂಟೆಗಳ ನಿರಂತರ “ಡಬಲ್ ಡಚ್” ವಿಶ್ವದಾಖಲೆಯ ಕ್ರೀಡಾಕೂಟಕ್ಕೆ ಕ್ಷಣಗಣನೆ ಆರಂಭವಾಗಿದೆ.
ಸ್ಥಳೀಯ ಸಾಯಿಲೀಲಾ ರಂಗಮಂದಿರ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದು ಕ್ರೀಡಾಪಟುಗಳ ನಿರಂತರ 36 ಗಂಟೆಯ ದಾಖಲೆಗೆ ಸಾಕ್ಷಿಯಾಗಲಿದೆ.  ಜಂಪ್‍ರೋಪ್ ಹೊಸ ಹೆಸರಾದರೂ ನಮ್ಮ ಭಾರತೀಯ ಸಂಸ್ಕೃತಿಯ ಪುರಾತನಕ್ರೀಡೆ“ಹಗ್ಗದಾಟ”ವೇ ಆಗಿದೆ. ದೈಹಿಕಕ್ಷಮತೆ ವೃದ್ದಿಸುವ ಮೂಲಕ ನಮ್ಮ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿರುವ ಈ ಹಗ್ಗದಾಟಇಂದುತನ್ನ ಸ್ವರೂಪವನ್ನು ಬದಲಾಯಿಸುವ ಮೂಲಕ “ಜಂಪ್‍ರೋಪ್” ಆಗಿ ವಿಶ್ವ ಮಾನ್ಯತೆಯನ್ನು ಪಡೆದುಕೊಂಡಿದೆ ಎಂದು ತಿಳಿಸಲು ಭಾರತೀಯರಾದ ನಾವು ಹೆಮ್ಮೆಪಡುತ್ತೇವೆ. ಇಂತಹ ಸಂದರ್ಭಲದಲಿ ಹೊಸಪೇಟೆಯಲ್ಲಿ ವಿಕಾಸ ಬ್ಯಾಂಕ್ ಬೆಳ್ಳಿಹಬ್ಬದ ಸವಿನೆನಪಿಗಾಗಿ ವಿಶ್ವದಾಖಲೆಯ ಕ್ಷಣವೂ ಅವಿಸ್ಮರಣೀಯವೆ.
ಆತಿಥ್ಯೆಯ ಕರ್ನಾಟಕ ಸೇರಿದಂತೆ, 18 ರಾಜ್ಯಗಳ ತಂಡಗಳು ಭಾಗವಹಿಸಲು ಬರಲಾರಂಭಿಸಿದ್ದು ಈಗಾಗಲೇ 4 ರಾಜ್ಯಗಳ ಕ್ರೀಡಾಪಟುಗಳು ನಗರವನ್ನು ತಲುಪಿದ್ದಾರೆ. ಇನ್ನಷ್ಟು ರಾಜ್ಯಗಳು ಕ್ರೀಡಾಪಟುಗಳು ಸಂಜೆಯೊಳಗೆ ಹೊಸಪೇಟೆಯನ್ನು ಸೇರಲಿದ್ದು ನೂತನ ವಿಜಯನಗರ ಜಿಲ್ಲೆ ಐತಿಹಾಸಿಕ ಕ್ಷಣಕ್ಕೆ ಅಣಿಯಾಗಲಿದೆ. ನಿಣಾಯಕರು, ದಾಖಲಾತಿ ತಂಡ ಹಾಗೂ ಪಾಲ್ಗೊಳ್ಳುವ 150 ಮಕ್ಕಳು ಹೊಸಪೇಟೆ ತಲುಪಿದ್ದಾರೆ,
ಕರ್ನಾಟಕದ ಹೊಸಪೇಟೆಯಲ್ಲಿ ವಿಶ್ವದಾಖಲೆಯ ಕ್ಷಣ ಆರಂಭಕ್ಕೆ ಕೌತುಕನಾಗಿದ್ದೇನೆ ರಾಷ್ಟೀಯ ಕ್ರೀಡಾಕೂಟಕ ಜೊತೆ ವಿಶ್ವದಾಖಲೆಯ ಕ್ಷಣಕ್ಕೆ ಸಾಕ್ಷಿಯಾಗುತ್ತಿನೆ ಎಂಬ ಹೆಮ್ಮೆಯಾಗುತ್ತಿದೆ ಎನ್ನುತ್ತಾರೆ ಕ್ರೀಡಾಪಟುಗಳು.
ಕ್ರೀಡಾಪಟುಗಳಿಗೆ ಅಗತ್ಯ ವಸತಿ, ಊಟ ಹಾಗೂ ಕ್ರೀಡಾಸಾಧನೆಗೆ ಎಲ್ಲಾ ಅಗತ್ಯ ವ್ಯವಸ್ಥೆಗಳು ಪೂರ್ಣಗೊಂಡಿವೆ ಎಂದು ಕರ್ನಾಟಕ ಜಂಪ್‍ರೋಪ್ ಅಸೋಶಿಯೇಷನ್ ಅಧ್ಯಕ್ಷ ವಿಶ್ವನಾಥ ಹಿರೇಮಠ ಸುದ್ದಿಗಾರರಿಗೆ ತಿಳಿಸಿದರು.

Attachments area