ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ

ಜಗಳೂರು.ನ.೧೧; ಯಾರು ಕಾನೂನನ್ನು ಪಾಲಿಸುತ್ತಾರೋ ಮತ್ತು ಗೌರವಿಸುತ್ತಾರೆ ಅಂತವರಿಗೆ ಕಾನೂನು ನ್ಯಾಯಾಂಗದಲ್ಲಿ ಗೌರವಸಿಗುತ್ತದೆ ಹಾಗೂ ರಕ್ಷಣೆಯೂ ಮಾಡುತ್ತದೆ ಎಂದು ಜೆಎಂಎಫ್‌ಸಿ ನ್ಯಾಯಾಧೀಶರಾದ ಜಿ.ತಿಮ್ಮಯ್ಯ ಕರೆನೀಡಿದರು. ಜಗಳೂರು ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ. ಆಯೋಜಿಸಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ ಜಗಳೂರು ಮತ್ತು ವಕೀಲರ ಸಂಘ ಕಾನೂನು ಅರಿವು ನೆರವು ಕಾರ್ಯಕ್ರಮ. ಸಸಿಗೆ ನೀರನ್ನು ಹಾಕುವ ಮೂಲಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಈ ದೇಶದ ನೆಲದಲ್ಲಿ ಇರುವವರಿಗೆ ಪ್ರತಿಯೊಬ್ಬರಿಗೂ ಸಮಪಾಲು ಸಮಬಾಳು ಇರುವುದು ಎಲ್ಲರೂ ಸಹ ಗೌರವವಿತವಾಗಿ ಇರಬೇಕು. ಜನಗಳಿಗೆ ಸರ್ಕಾರದ ಯೋಜನೆಗಳು ಸರಿಸಮನಾಗಿ ಸಿಗಬೇಕು ಎಂದು ಅದರ ಮೂಲ ಉದ್ದೇಶವಾಗಿರುತ್ತದೆ. ನಮ್ಮ ದೇಶದಲ್ಲಿ ೨೪೦೦ ಹೆಚ್ಚು ಕಾನೂನು ಸೇವಾ ಸಮಿತಿಗಳು ಇವೆ. ಜಿಲ್ಲೆ ತಾಲೂಕು ಮಟ್ಟದ ಪ್ರತಿಯೊಂದು ಗ್ರಾಮಗಳಿಗೆ ಹೋಗಿ ಮೂಲ ಉದ್ದೇಶ ಕಾನೂನು ಅರಿವು ನೆರವು ಕಾರ್ಯಕ್ರಮ ಮಾಡುವುದು ಮಹಾತ್ವಾಕಾಂಕ್ಷೆಯಲ್ಲಿ ನ್ಯಾಯಾಧೀಶರು ಚಾಲನೆ ಕೊಡುತ್ತಾ ಹೋದರೂ ಅದರ ಜೊತೆಗೆ ಅವರು ಮಾಡುವ ಮೂಲಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. ನ್ಯಾಯಾಧೀಶರು ಉಚಿತವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಮಾಡಿಕೊಳ್ಳುತ್ತಾ ಬಂದಿದ್ದಾರೆ.

ನಾವು ಸಹ ಬಂದನಂತರ ಜಗಳೂರಿನ ಗ್ರಾಮಗಳಿಗೆ ಹೋಗಿ ಉಚಿತವಾಗಿ ಅರಿವು-ನೆರವು ಕಾರ್ಯಕ್ರಮಗಳನ್ನು ನೆರವೇರಿಸಿಕೊಂಡು ಬಂದಿದ್ದೇವೆ. ಕೆಲವರ ಸಮಸ್ಯೆಗಳನ್ನು ಲೋಕ ಅದಾಲತ್ ಸಾಕ್ಷ ಇತ್ಯರ್ಥ ಗೊಂಡಿದ್ದು ಅವರು ತಿಳಿಸಿದರು. ಸರ್ಕಾರಿ ಸಂಯೋಜಕರಾದ ರೂಪ ಮಾತನಾಡಿ ನಾವು ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯನ್ನು ಪ್ರತಿವರ್ಷವೂ ಮಾಡಿಕೊಂಡು ಬರುತ್ತಿದ್ದೇವೆ. ೧೯೮೭ರಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳು ದಿನಾಚರಣೆ ಮಾಡಲಾಯಿತು ೧೯೯೫ ರಲ್ಲಿ ಮೊದಲ ಬಾರಿಗೆ ಬೆಳಕಿಗೆ ಬಂದಿದ್ದು ಅಲ್ಲಿಂದ ಇಲ್ಲಿಯವರೆಗೆ ಪ್ರತಿವರ್ಷವೂ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು. ಯಾವ ಉದ್ದೇಶದಿಂದ ಪ್ರಾರಂಭವಾಯಿತು ಎಂದರೆ ಈ ಆಚರಣೆಯು ಸಾರ್ವಜನಿಕರು, ಬಡವರು, ಮಹಿಳೆಯರು, ಮಕ್ಕಳು ಎಲ್ಲರಿಗೂ ಸಮನ್ವಯವಾಗಿ ನ್ಯಾಯ ಸಿಗಬೇಕು ಅನ್ನುವ ಉದ್ದೇಶದಿಂದ. ಆಚರಣೆ ಮಾಡುವ ಮೂಲಕ . ಪ್ರತಿಯೊಬ್ಬರಿಗೂ ಕಾನೂನು ತಿಳಿದುಕೊಳ್ಳಬೇಕು ಪ್ರತಿಯೊಂದು ಗ್ರಾಮಗಳಿಗೆ ಹೋಗಿ ಅರಿವು-ನೆರವು ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ವೈ.ಹನುಮಂತಪ್ಪ, ಬಸವರಾಜಪ್ಪ, ಪಂಪಣ್ಣ,ತಿಪ್ಪೇಸ್ವಾಮಿ, ಕರಿಬಸಪ್ಪ, ಶ್ರೀನಿವಾಸ್, ಸಣ್ಣಓಬಯ್ಯ,ಕಲ್ಲೇಶ್, ದೊಡ್ಡ ಬೋರಯ್ಯ,ಪರಶುರಾಮಪ್ಪ ಇತರರು ಭಾಗವಹಿಸಿದ್ದರು.
ಪೋಟೋ-೧೪