ರಾಷ್ಟ್ರೀಯ ಒಲಿಂಪಿಯಾಡ್ ಯತಿನ್‌ಗೆ ದ್ವಿತೀಯ ರ್‍ಯಾಂಕ್

ಪುತ್ತೂರು;, ಡಿ.೧೮- ದೆಹಲಿಯ ಆರೆಂಜ್ ಗ್ಲೋಬಲ್ ಒಲಿಂಪಿಯಾಡ್  ಅವರು ೨೦೧೯-೨೦ ಶೈಕ್ಷಣಿಕ ಸಾಲಿನಲ್ಲಿ  ನಡೆಸಿದ ರಾಷ್ಟ್ರೀಯ ಒಲಿಂಪಿಯಾಡ್ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿ ಯತಿನ್ ಬಿ.ಎಸ್ ರಾಷಮಟ್ಟದ ವಿಜ್ಞಾನ ವಿಭಾಗದ ಸ್ಪರ್ಧೆಯಲ್ಲಿ ದ್ವಿತೀಯ ರ್‍ಯಾಂಕ್ ಪಡೆದಿದ್ದಾನೆ. ಈ ಪ್ರಶಸ್ತಿ ರೂ. ೪೦,೦೦೦ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಹೊಂದಿದೆ.

 ಈತ  ಕಡಬ ನಿವಾಸಿ ನಿವೃತ್ತ ಯೋಧ ಸೇಸಪ್ಪ ಗೌಡ ಮತ್ತು ಪುತ್ತೂರು ಠಾಣೆಯ ಮಹಿಳಾಪೊಲೀಸ್ ಹೇಮಾವತಿ ಇವರ ಪುತ್ರನಾಗಿದ್ದಾನೆ. ಈತನಿಗೆ ಕಂಪ್ಯೂಟರ್ ವಿಭಾಗದ ಶಿಕ್ಷಕ ರಾಜಶೇಖರ್.ಬಿ.ಸಿ ಇವರು ಮಾರ್ಗದರ್ಶನ ನೀಡಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.