ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ಭಾಷಾ ಸೌಹಾರ್ದತಾ ದಿನ


ದಾವಣಗೆರೆ, ನ.೨೨; ಜಿ ಕಾನೂನು ಸೇವಾ ಪ್ರಾಧಿಕಾರ, ಜಿ ವಕೀಲರ ಸಂಘ, ರಾಬ್ತಾಯೆ ಮಿಲ್ಲತ್ ಸಂಘಟನೆ , ದಾವಣಗೆರೆ ಇವುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ಭಾಷಾ ಸೌಹಾರ್ದತಾ ದಿನವನ್ನು ಇಲ್ಲಿನ ಆಜಾದ್ ನಗರ, ಮಾಗಾನಹಳ್ಳಿ ರಸ್ತೆಯ ಸ್ಟಾರ್ ಬುತ್ತಿ ಸ್ಟೀಲ್ ಟ್ರೇಡರ್‍ಸ್‌ನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿ ಕಾನೂನು ಸೇವಾ ಪ್ರಾಧಿಕಾರ, ಸದಸ್ಯ ಕಾರ್ಯದರ್ಶಿ ಗೌರವಾನ್ವಿತ ಸಾಬಪ್ಪನವರು ನೆರವೇರಿಸಿ ಮಾತನಾಡುತ್ತಾ, ಭಾರತ ಅನೇಕ ಭಾಷೆ, ಜನಾಂಗಗಳಿರುವ ದೇಶವಾಗಿದ್ದು, ಭಾಷಾ ಸೌಹಾರ್ದತೆ ನಮ್ಮ ದೇಶದ ಅಗತ್ಯವಾಗಿದೆ. ಪ್ರತಿಯೊಬ್ಬರೂ ಇನ್ನೊಂದು ಭಾಷೆಗೆ ಗೌರವ ಕೊಡುವುದರ ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಬೇಕಾಗಿದೆ ಎಂದು ತಿಳಿಸಿದರು. ನಮ್ಮ ಮಾತೃಭಾಷೆಯನ್ನು ಕಾಪಾಡಿಕೊಳ್ಳುವುದರ ಮೂಲಕ ಇತರ ಭಾಷೆಗಳನ್ನು ಕಲಿಯುವುದು ಇಂದಿನ ಅಗತ್ಯವಾಗಿದೆ. ಇಂದಿನ ಜಾಗತಿಕ ಯುಗದಲ್ಲಿ ಬೇರೆ ಭಾಷೆಗಳನ್ನು ಕಲಿಯುವುದು ಅಗತ್ಯವಾಗಿದ್ದು, ಭಾಷೆಗಳಿಗೆ ಯಾವುದೇ ಭೇದ ಭಾವ ಇರುವುದಿಲ್ಲ. ಭಾಷೆ, ಧರ್ಮ, ವರ್ಗಗಳ ಹೆಸರಿನಲ್ಲಿ ನಾವು ಯಾವುದೇ ತಾರತಮ್ಯಗಳನ್ನು ಮಾಡಕೂಡದೆಂದು ಪ್ರತಿಪಾದಿಸಿದರು.ಮುಖ್ಯ ಅತಿಥಿಗಳಾಗಿ ಮಾತನಾಡಿದ ವಿಶೇಷ ಅಭಿಯೋಜಕ ಶೌಕತ್ ಅಲಿ ಅವರು, ಭಾಷೆಗಳು ನಮಗೆ ಸೇತುವೆಯಾಗಬೇಕೇ ಹೊರತು ಗೋಡೆಗಳಾಗಬಾರದು, ಭಾರತ ದೇಶವು ಭಾಷಾ ಸೌಹಾರ್ದತೆಗೆ ಹೆಸರಾಗಿದ್ದು ನಮ್ಮ ನಾಡು ಮತ್ತು ನಮ್ಮ ದೇಶ ಎನ್ನುವ ಮೂಲತತ್ವದಡಿಯಲ್ಲಿ ನಾವೆಲ್ಲರೂ ಸಾಗಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯP ಎನ್.ಟಿ. ಮಂಜುನಾಥ್ ಅವರು, ಇಂದಿನ ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯ ಜೊತೆಗೆ ವಿವಿಧ ಬೇರೆ ಭಾಷಗಳನ್ನು ಕಲಿಯುವುದರ ಮೂಲಕ ತಮ್ಮ eನಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕೆಂದು ತಿಳಿಸಿದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್. ಅರುಣ್‌ಕುಮಾರ್ ಅವರು ಮಾತನಾಡುತ್ತಾ, ಭಾಷೆಯೆನ್ನುವುದು ಮನುಕುಲಕ್ಕೆ ಮಾತ್ರ ಸೀಮಿತವಾಗಿದೆ. ಮನುಷ್ಯ ಉತ್ಪಾದಿಸುವ ಪ್ರತಿಯೊಂದು ಶಬ್ದಕ್ಕೂ ಅರ್ಥವಿದೆ. ಹೀಗೆ ಶಬ್ದವೇ ಒಂದು ಭಾಷೆಯಾಗಿ ಹೊರಬರುತ್ತದೆ ಎಂದರು. ಜಗತ್ತಿನಲ್ಲಿ ಎಷ್ಟೋ ಭಾಷೆಗಳಿಗೆ ಲಿಪಿಯೇ ಇರುವುದಿಲ್ಲ. ಅವು ಬಾಯಿಂದ ಬಾಯಿಗೆ ಹರಡುತ್ತಲೇ ಉಳಿದುಕೊಂಡು ಬಂದಿವೆ. ಭಾಷೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಮತ್ತು ಭಾವೈಕ್ಯತೆಗೆ ದಾರಿಯಾಗಿದ್ದು, ಭಾಷಾ ಸಾಮರಸ್ಯವನ್ನು ಕಾಪಾಡುವುದರ ಮೂಲಕ ಭಾವೈಕ್ಯತೆಯನ್ನು ಸಾಧಿಸಬಹುದಾಗಿದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯPತೆ ವಹಿಸಿದ್ದ ಕರ್ನಾಟಕ ನಾಗರೀಕ ಹಿತರPಣಾ ಮತ್ತು ಸೇವಾ ಸಮಿತಿ ಅಧ್ಯP ಬುತ್ತಿ ಹುಸೇನ್ ಪೀರ್ ಮಾತನಾಡಿ, ಭಾರತದಲ್ಲಿ ಉಳಿದ ದೇಶಗಳಿಗಿಂತ ಹೆಚ್ಚು ಭಾಷೆಗಳು, ಬುಡಕಟ್ಟುಗಳು, ವರ್ಗಗಳು ಇದ್ದು, ಪ್ರತಿಯೊಂದು ಭಾಷೆಯನ್ನು ಉಳಿಸುವುದು ಅವಶ್ಯಕವಾಗಿದೆ. ಆ ಮೂಲಕ ಭಾಷಾ ಸೌಹಾರ್ದತೆಯನ್ನು ಕಾಪಾಡುವುದರಿಂದ ಭಾಷಾ ಸೌಹಾರ್ದತಾ ದಿನಕ್ಕೆ ಅರ್ಥ ಕೊಡಬೇಕಾಗಿದೆ ಎಂದರು.
ಸಮಾರಂಭದಲ್ಲಿ ಹಿರಿಯ ವಕೀಲ ಎನ್.ಎಂ. ಆಂಜನೇಯ ಗುರೂಜಿ, ಮುಸ್ಲಿಂ ಎಜುಕೇಷನ್ ಫಂಡ್ ಅಸೋಸಿಯೇಷನ್‌ನ ನಿರ್ದೇಶಕ ಎಸ್.ಜಿ. ಮೊಹಿಯುದ್ದೀನ್ ಮಾತನಾಡಿದರು.
ಪೋಟೋ-೧