ರಾಷ್ಟ್ರೀಯ ಏಕೀಕರಣ ದಿನ ಸಂಭ್ರಮಾಚರಣೆ

ವಿಜಯಪುರ, ನ ೧೯- ದಿವಂಗತ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರ ಜನ್ಮದಿನವನ್ನು ರಾಷ್ಟ್ರೀಯ ಏಕೀಕರಣ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಕಾರಣ ಆಕೆ ಮಾಡಿರುವಂತಹ ಹೋರಾಟಗಳು, ಯಾವುದೇ ಜಾತಿ, ಧರ್ಮ ಭೇದವಿಲ್ಲದೆ ಹರಿದು ಹಂಚು ಹೋಗಿರುವಂತಹದ್ದಾಗಿದ್ದು, ಪ್ರಾಂತ್ಯಗಳನ್ನು ಒಗ್ಗೂಡಿಸಲು ಹೋರಾಟವನ್ನು ಮಾಡಿದರು ಎಂದು ಪ್ರಗತಿ ಶಾಲೆಯ ಮುಖ್ಯೋಪಾಧ್ಯಾಯರಾದ ಜೆ. ಎನ್. ಪ್ರಕಾಶ್‌ರವರು ತಿಳಿಸಿದರು.
ಅವರು ಪಟ್ಟಣದ ಪ್ರಗತಿ ಆಂಗ್ಲ ಶಾಲೆಯಲ್ಲಿ ಶನಿವಾರದಂದು ನಡೆದ ದಿವಂಗತ ಇಂದಿರಾಗಾಂಧಿ ರವರ ೧೦೫ ನೇ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡು, ಮಾತನಾಡಿದರು.
ಶಾಲೆಯ ಸಹ ಶಿಕ್ಷಕಿ ವನಜಾಕ್ಷಿ ಮಾತನಾಡಿ,ಉಕ್ಕಿನ ಮಹಿಳೆ ಎಂದೇ ಖ್ಯಾತಿ ಪಡೆದಿದ್ದ ಶ್ರೀಮತಿ ಇಂದಿರಾ ಗಾಂಧಿ ರವರು ಎಲ್ಲಿ ,ಯಾವಾಗ ಜನಿಸಿದರು ಮತ್ತು,ಅವರ ಜೀವನದ ಬಗ್ಗೆ ಸವಿವರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಶಿಕ್ಷಕಿ ಪವಿತ್ರರವರು ಮಾತನಾಡಿ, ಸಮಾಜದಲ್ಲಿ ಯಾವುದೇ ಅಡ್ಡಿ ಬಂದರೂ ಕೂಡ ಇಂದಿರಾಗಾಂಧಿರವರು ತನ್ನ ಹೋರಾಟದಲ್ಲಿ ಮುಂದುವರೆದು, ಯಾವುದೇ ತೀರ್ಮಾನ ವಿರೋಧಗಳಿಗೂ ಜಗ್ಗದೇ, ಉಕ್ಕಿನ ಮಹಿಳೆ ಎಂಬ ಬಿರುದನ್ನು ಪಡೆದಿದ್ದರು ಎಂಬುದನ್ನ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.