ರಾಷ್ಟ್ರೀಯ ಏಕತಾ ದಿನದ ನಿಮಿತ್ತ ಏಕತಾ ನಡಿಗೆ

ಬಳ್ಳಾರಿ, ಅ.31: ರಾಷ್ಟ್ರೀಯ ಏಕತಾ ದಿನದ ನಿಮಿತ್ತ ಬಳ್ಳಾರಿ ಜಿಲ್ಲಾ ಪೊಲೀಸ್ ರಿಂದ ನಗರದಲ್ಲಿ ಇಂದು ಏಕತಾ ನಡಿಗೆ ಜರುಗಿತು.
ನಗರದ ಕನಕದುರ್ಗಮ್ಮ ದೇವಸ್ಥಾನದಿಂದ ಆರಂಭವಾದ ಏಕತಾ ಓಟಕ್ಕೆ ಎಸ್ಪಿ ಸೈದುಲು ಅಡಾವತ್ ಅವರು ಚಾಲನೆ ನೀಡಿದರು. ಏಕತಾ ನಡಿಗೆಯು ಕನಕದುರ್ಗಮ್ಮ ದೇವಸ್ಥಾನದಿಂದ ಗಡಗಿ ಚನ್ನಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಮಾರ್ಗವಾಗಿ ಎಚ್.ಆರ್.ಗವಿಯಪ್ಪ ವೃತ್ತದವರೆಗೆ ನಡೆಯಿತು.
ಏಕತಾ ನಡಿಗೆಗೆ ಚಾಲನೆ ನೀಡಿ ಮಾತನಾಡಿದ ಎಸ್ಪಿ ಸೈದುಲು ಅಡಾವತ್ ಅವರು ಸಾರ್ವಜನಿಕರಲ್ಲಿ ಏಕತೆ ಮೂಡಿಸುವ ಉದ್ದೇಶದಿಂದ ಈ ಏಕತಾ ನಡಿಗೆ ಆಚರಿಸಲಾಗುತ್ತಿದೆ.ನಾವು ಮಾಡುವ ಈ ಜಾಥಾ ನಡಿಗೆಯು ಸೃಜನಾತ್ಮಕವಾಗಿರಬೇಕು. ಶಿಸ್ತು ಪಾಲನೆಯಲ್ಲಿ ಪೊಲೀಸರು ಮೊದಲಾಗಬೇಕು ಎಂದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ರಮೇಶ್ ಕುಮಾರ, ಸಿಪಿಐ ನಾಗರಾಜ್ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.