ರಾಷ್ಟ್ರೀಯ ಎಡಿಐಪಿ ಯೋಜನೆ ಅಡಿಯಲ್ಲಿ ಉಚಿತ ಶ್ರವಣ ಯಂತ್ರ ವಿತರಣಾ ಶಿಬಿರ

ಬೀದರ:ಮಾ.26:ರಾಷ್ಟ್ರೀಯ ಂಆIP ಯೋಜನೆ ಅಡಿಯಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಶ್ರವಣ ದೋಷ ನಿಯಂತ್ರಣಾ ಹಾಗೂ ನಿವಾರಣ ಘಟಕದ ವತಿಯಿಂದ ಆಯೋಜಿಸಲಾದ ಉಚಿತ ಶ್ರವಣ ಯಂತ್ರ ವಿತರಣೆ ಹಾಗೂ ತಪಾಸಣೆಯ ಶಿಬಿರವನ್ನು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್, ಬೀದರ ಶ್ರೀಮತಿ ಜಹೆರಾ ನಸೀಮ್ ರವರು ಉದ್ಘಾಟಿಸಿ ಮಾತನಾಡುತ್ತಾ ಎಲ್ಲಾ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆÀಂದು ಆಗ್ರಹಿಸಿದರು. ಒಟ್ಟು 52 ಫಲಾನುಭವಿಗಳು ಶಿಬಿರದಲ್ಲಿ ಪಾಲ್ಗೊಂಡು, ಕೇಂದ್ರ ಸರ್ಕಾರದ ವತಿಯಿಂದ ಒದಗಿಸಲಾದ ಸೌಕರ್ಯವನ್ನು ಫಲಾನಿಭವಿಗಳಿಗೆ ತಲುಪಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಆರೋಗ್ಯ ಮತು ಕುಟುಂಬ ಕಲ್ಯಾಣ ಅಧಿಕಾರಿಗಳು ಬೀದರ. ಡಾ|| ವಿ.ಜಿ.ರೆಡ್ಡಿಯವರು ಮಾತನಾಡಿ ಮುಂಬರುವ ದಿನಗಳಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಂIISಊ ಒಙSಔಖಇ ರವರ ಸಹಭಾಗಿತ್ವದಿಂದ ಇಘಿಖಿಇಓಖಿIಔಓ UಓIಖಿ ಸ್ಥಾಪಿಸಲಾಗುವು. ಇದರಲ್ಲಿ ನವಜಾತ ಮಕ್ಕಳಿಗೆÉ ಶ್ರವಣದೋವಿರುವ ಬಗ್ಗೆ ಉಚಿತ ತಪಾಸಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸದರಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ|| ಗೌರಿಶಂಕರ ಪಾಟೀಲ ರವರು ಕಿವುಡ ಮತ್ತು ಮೂಕತನದ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಕಿವಿ, ಮೂಗು ಮತ್ತು ಗಂಟಲು ಶಸ್ತ್ರ ಚಿಕಿತ್ಸಕರಾದ ಡಾ|| ಸುಮಂತ ಕಣಜಿಕರ ರವರು ಮಾತನಾಡಿ ಆಪ್ತಸಮಾಲೋಚನೆಯ ಮಹತ್ವವನ್ನು ತಿಳಿಸಿಕೊಟ್ಟರು. ಹೈದರಾಬಾದಿನಿಂದ ಆಗಮಿಸಿದ ವಿಶೇಷಜ್ಞರ ತಂಡವು ಎಲ್ಲಾ ಫಲಾನುಭವಿಗಳ ತಪಾಸಣೆ ಮಾಡಿ ಶ್ರವಣ ಯಂತ್ರವನ್ನು ಹೇಗೆ ಉಪಯೋಗಿಸಬೇಕು ಎಂಬುವುದನ್ನು ತಿಳಿಸಿಕೊಟ್ಟರು. ದಿನ ಪೂರ್ತಿ ಶಿಬಿರವನ್ನು ನಡೆಸಲಾಯಿತು. ಡಾ|| ಲಕ್ಷ್ಮಿಕಾಂತ ವಲ್ಲೆಪೂರೆ ರವರು ಕಾರ್ಯಕ್ರಮದ ಸಂಚಾಲನೆಯನ್ನು ಮಾಡಿದರು. ಜಿಲ್ಲೆಯ ಓPPಅಆ ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಡಾ|| ಶಿವಶಂಕರ ಬಿ, ಜಿಲ್ಲಾ ಶ್ರವಣ ದೋಷ ನಿಯಂತ್ರಣ ಘಟಕದ ಕಿವಿ, ಮೂಗು ಮತ್ತು ಗಂಟಲ ತಜ್ಞ ವೈದ್ಯರಾದ ಡಾ|| ನಿಶಾ ಕೌರ್ ಹಾಗೂ ಆಡಿಯೋಲಾಜಿಸ್ಟ ವೆಂಕಟರಮಣ.ಡಿ, ಸಿಬ್ಬಂದಿಗಳಾದ ಬಿಲಾಲ್ ಹಾಗೂ ಸೊಹೇಲ್ ರವರು ಉಪಸ್ಥತರಿದ್ದರು.