ರಾಷ್ಟ್ರೀಯತೆ ಶಿಕ್ಷಣ ಇಂದಿನ ಅಗತ್ಯ:ಗೋಪಾಲಜಿ

ಕಲಬುರಗಿ,ಮೇ 29: ಹೆಚ್ಚು ಅಂಕ ಪಡೆಯುವ ಶಿಕ್ಷಣಕ್ಕಿಂತ ರಾಷ್ಟ್ರೀಯತೆ ಶಿಕ್ಷಣ ಕೊಡುವುದು ಇಂದಿನ ಅಗತ್ಯವಾಗಿದೆ ಎಂದು ವಿಶ್ವ ಹಿಂದೂ ಪರಿಷತ್‍ನ ಕೇಂದ್ರೀಯ ಸಹ ಕಾರ್ಯದರ್ಶಿ ಗೋಪಾಲಜಿ ಅಭಿಮತ ವ್ಯಕ್ತಪಡಿಸಿದರು.
ಗಾಣಗಾಪುರ ರಸ್ತೆÉಯಲ್ಲಿ ನೂತನವಾಗಿ ಆರಂಭಗೊಂಡ ರಾಷ್ಟ್ರೋತ್ಥಾನ ಶಾಲೆ ಕಟ್ಟಡದ ವಾಸ್ತುಶಾಂತಿ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಭಾಗÀದಲ್ಲಿ ರಾಷ್ಟ್ರೋತ್ಥಾನ ವಿದ್ಯಾಲಯ ಸ್ಥಾಪನೆಯ ಬಹು ದಿನದ ಕನಸು ಈಗ ನನಸಾಗಿದೆ. ಶಿಕ್ಷಣದ ಜತೆ ಉತ್ತಮ ಸಂಸ್ಕಾರ ಹಾಗೂ ರಾಷ್ಟ್ರೀಯತೆ ಶಿಕ್ಷಣ ನೀಡುವ ಉದ್ದೇಶದಿಂದ ಈ ಶಾಲೆÉ ಆರಂಭಿಸಲಾಗಿದೆ ಎಂದರು.
ಶಿಕ್ಷಣ ಎಂದರೆ ಕೇವಲ ಮಾಹಿತಿ ಕೊಡುವುದಲ್ಲ. ವಿವೇಕ ನೀಡುವ ಮಾಧ್ಯಮವೇ ಶಿಕ್ಷಣವೆನಿಸಿಕೊಳ್ಳುತ್ತದೆ. ವಿದ್ಯಾರ್ಥಿಗಳಿಂದ ಭವ್ಯ ಭಾರತ ಕಟ್ಟಲು ಸಾಧ್ಯ. ಹೀಗಾಗಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದು ಅಗತ್ಯವಾಗಿದೆ. ಕೇವಲ ರಾಷ್ಟ್ರೋತ್ಥಾನ ಸಂಸ್ಥೆ ಮಾತ್ರವಲ್ಲ್ಲ ಸಮಾಜದ ಎಲ್ಲ ಶಿಕ್ಷಣ ಸಂಸ್ಥೆಗಳು ಸಂಸ್ಕಾರಯುತ ಶಿಕ್ಷಣ ನೀಡಿದಾಗ ಮಾತ್ರ ಭವ್ಯ ಭಾರತ ನಿರ್ಮಾಣವಾಗಲು ಸಾಧ್ಯ ಎಂದರು.
ಕನ್ನಡದ ಬದಲಾಗಿ ಆಂಗ್ಲ ಭಾಷೆಯ ಮೇಲೆ ವ್ಯಾಮೋಹ ಹೆಚ್ಚಾಗುತ್ತಿದೆ. ಇದರಿಂದ ಸಂಸ್ಕಾರ ಕೊರತೆ ಎದ್ದುಕಾಣುತ್ತಿದೆ. ಸಮಾಜದಲ್ಲಿನ ಪ್ರವಾಹ ತಡೆಗಟ್ಟಲು ಸಾಧ್ಯವಾಗದಿದ್ದರೂ ಪ್ರವಾಹದ ದಿಕ್ಕನ್ನು ಬದಲಿಸಲು ಪ್ರಯತ್ನಿಸಬೇಕು. ಆಂಗ್ಲ ಶಾಲೆಯಲ್ಲೂ ರಾಷ್ಟ್ರೀಯತೆ ಶಿಕ್ಷಣ ಸಿಗುವಂತಾಗಬೇಕು. ಶಿಕ್ಷಣ ಆಂಗ್ಲ ಮಾಧ್ಯಮದಲ್ಲಿ ಕೊಟ್ಟರೂ ಭಾರತದ ಸಂಸ್ಕøತಿ, ಇತಿಹಾಸ, ಪರಂಪರೆಯನ್ನು ಮಕ್ಕಳಿಗೆ ಕಲಿಸಬೇಕು ಎಂದು ಅವರು ಸಲಹೆ ನೀಡಿದರು.
ಶಿಕ್ಷಣ ವ್ಯಾಪಾರವಾಗಬಾರದು. ಶಿಕ್ಷಣದಲ್ಲಿ ಮಮತೆ ಇರಬೇಕು, ರಾಷ್ಟ್ರ ಭಕ್ತಿ ಮೂಡಿಸುವಂತಿರಬೇಕು. ದೇಶದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಭ್ರಷ್ಟಾಚಾರ ನಿರ್ಮೂಲನೆಯಾಗಬೇಕಾದರೆ ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಮೌಲ್ಯಯುತ ಶಿಕ್ಷಣ ನೀಡಬೇಕು. ಶಿಕ್ಷಣದ ಜತೆ ಶುದ್ಧ ರಾಷ್ಟ್ರೀಯತೆ ಬಿಂಬಿಸುವ ಅಂಶ ಅಳವಡಿಸಿಕೊಳ್ಳಬೇಕಿದೆ ಎಂದರು.
ಶರಣಬಸವ ವಿಶ್ವವಿದ್ಯಾಲಯದ ಚೇರ್ ಪರ್ಸನ್ ಮಾತೋಶ್ರೀ ಡಾ. ದಾಕ್ಷಾಯಿಣಿ ಅಪ್ಪ, ಆರ್.ಎಸ್.ಎಸ್.ನ ಪ್ರಾಂತ ಸಂಘಚಾಲಕ ಖಗೇಶನ್ ಪಟ್ಟಣಶೆಟ್ಟಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಶಶೀಲ್ ನಮೋಶಿ, ಸುನೀಲ್ ವಲ್ಲ್ಯಾಪುರೆ, ಬಿ.ಜಿ.ಪಾಟೀಲ್, ಮುಖಂಡರಾದ ನಿತಿನ್ ಗುತ್ತೇದಾರ, ಡಾ. ಪ್ರಹ್ಲಾದ ಬುರ್ಲಿ, ರವಿ ಲಾತೂರಕರ್, ಅಭಿಜಿತ ದೇಶಮುಖ ಉಪಸ್ಥಿತರಿದ್ದರು. ರತ್ನಾಕರ ವಂದಿಸಿದರು. ಕೃಷ್ಣ ಜೋಶಿ ನಿರೂಪಿಸಿದರು.
ಸಂಕ್ರಾಂತಿ ನಂತರ ರಾಮಮೂರ್ತಿ ಪ್ರತಿಷ್ಠಾಪನೆ
ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ನಿರ್ಮಾಣದ ಕಾರ್ಯ ಚುರುಕಾಗಿ ಸಾಗುತ್ತಿದೆ. ಮಂದಿರದ ಮೊದಲ ಮಹಡಿ ಕಾರ್ಯ ಈಗಾಗಲೆ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದ್ದು, 2024ರ ಸಂಕ್ರಾಂತಿ ನಂತರ ಮಂದಿರದಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ ಎಂದು ಅಯೋಧೆÀ್ಯ ರಾಮ ಮಂದಿರದ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಗೋಪಾಲಜಿ ವಿಶ್ವಾಸ ವ್ಯಕ್ತಪಡಿಸಿದರು. ಅಯೋಧ್ಯೆಯಲ್ಲಿನದು ಕೇವಲ ರಾಮಮಂದಿರವಲ್ಲ, ಅದು ರಾಷ್ಟ್ರಮಂದಿರ. ಭಾರತದ ಭವ್ಯ ಸಂಸ್ಕøತಿ ಬಿಂಬಿಸುವ ಪವಿತ್ರ ತಾಣವಾಗಿದೆ. ಕಾಶಿಯಲ್ಲಿ ಶಿವನು ಮೂಲ ಸ್ಥಾನದಲ್ಲಿ ನೆಲೆಸುವ ಹಾಗೂ ಮಥುರಾದಲ್ಲಿ ಶ್ರೀ ಕೃಷ್ಣನು ಜನ್ಮ ಸ್ಥಳದಲ್ಲಿ ನೆಲೆಸುವ ಕಾಲ ಸನ್ನಿಹಿತವಾಗಿದೆ ಎಂದು ನುಡಿದರು.