ರಾಷ್ಟ್ರೀಯತೆ ಕಾಪಾಡಲು ಶ್ರೀಗಳ ಕರೆ

ಕನಕಪುರ.ಡಿ೩೦:ಪ್ರತಿಯೊಬ್ಬ ಹಿಂದೂವು ಕೂಡ ನಮ್ಮ ರಾಷ್ಟ್ರೀಯತೆಯನ್ನು ಕಾಪಾಡಿಕೊಳ್ಳುವುದು ಅನಿವಾರ್‍ಯ ಎಂದು ಶ್ರೀ ಶಿವಗಿರಿ ಕ್ಷೇತ್ರದ ಪೀಠಾಧ್ಯಕ್ಷರಾದ ಅನ್ನದಾನೇಶ್ವರ ಸ್ವಾಮಿಗಳು ಕರೆನೀಡಿದ್ದಾರೆ.
ತಾಲೂಕಿನ ಜಕ್ಕೆಗೌಡನ ದೊಡ್ಡಿಯಲ್ಲಿ ರಾಮಜನ್ಮಭೂಮಿ ತೀರ್ಥಟ್ರಸ್ಟ್‌ನ ಪ್ರವಿತ್ರ ಮಂತ್ರಾಕ್ಷತೆ ವಿತರಣೆಯ ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿ ಮಾನತಾಡಿದರು.
ನಾವೆಲ್ಲಾ ಹಿಂದೂಗಳು ಎಂಬುದನ್ನು ಮರೆತರೆ ನಮ್ಮನ್ನು ಮುಗಿಸುತ್ತಾರೆ ಭಾರತ ದೇಶ ಜ್ಯಾತ್ಯಾತೀತ ರಾಷ್ಟ್ರವಾಗಿದ್ದು ಎಲ್ಲಾರಿಗೂ ನಾವು ಇಲ್ಲಿ ವಾಸ ಮಾಡಲು ಅವಕಾಶ ಮಾಡಿಕೊಟ್ಟಿದ್ದೇವೆ ಆದರೆ ನಮ್ಮ ಭೂಮಿಯಲ್ಲೆ ನಾವು ನೆಲೆಗಟ್ಟು ಕಳೆದುಕೊಳ್ಳುವ ಕಾಲ ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮರ್‍ಯಾದ ಪುರುಷೋತ್ತಮ ಶ್ರೀರಾಮಚಂದ್ರ ಹುಟ್ಟಿದ ಸ್ಥಾನವನ್ನು ಬಿಡಿಸಿಕೊಳ್ಳಲು ಇಷ್ಟುಕಾಲ ಬೇಕಾಯಿತು, ಜನವರಿ ೨೨ರಂದು ರಾಮಮಂದಿರ ನಿರ್ಮಾಣವಾಗಿ ಲೋಕಾರ್ಪಣೆಗೊಳ್ಳುತ್ತಿದೆ ಹಾಗಾಗಿ ಪ್ರತಿಯೊಬ್ಬ ಭಾರತೀಯರು ಪಕ್ಷಬೇಧ ಮರೆತು ಪವಿತ್ರ ಮಂತ್ರಾಕ್ಷತೆಯನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡುವ ಮೂಲಕ ಶ್ರೀ ರಾಮನ ಕೃಪೆಗೆ ಪಾತ್ರರಾಗುವಂತೆ ಕರೆನೀಡಿದರು.
ಗುರುವಿನ ಪುರ ಮಠದ ಜಗದೀಶ ಶಿವಾಚಾರ್‍ಯ ಸ್ವಾಮಿಗಳು ಮಾತನಾಡಿ ಪ್ರತಿಯೊಬ್ಬರೂ ಶ್ರೀರಾಮನ ಮಾರ್ಗದರ್ಶನದಲ್ಲಿ ನಡೆಯುವ ಮೂಲಕ ಶ್ರೀರಾಮನಗ ಭಕ್ತರಾಗಬೇಕು ಏಕರೀತಿಯ ಮನೋಭಾವನೆ ಬೆಳೆಸಿಕೊಳ್ಳಬೇಕೆಂಬ ಉದ್ದೇಶದಿಂದ ಅಯೋಧ್ಯಯಿಂದ ಇಲ್ಲಿವರೆಗೆ ಅಕ್ಷತೆಯನ್ನು ಹಂಚಲಾಗುತ್ತಿದೆ ಎಂದು ಹೇಳಿದರು.
ಕೋಲಾರದಲ್ಲಿ ಮನೆ ಮನೆಗೆ ಪವಿತ್ರ ಮಂತ್ರಾಕ್ಷತೆಯನ್ನು ತಲುಪಿಸುವ ಅದ್ಬುತ ಕಾರ್‍ಯಕ್ರಮ ನಡೆಯಿತು ಅಂತಹ ಕಾರ್‍ಯಕ್ರಮವನ್ನು ನಾವೆಲ್ಲರೂ ಕೂಡ ಮಾಡುವ ಮೂಲಕ ಶ್ರೀರಾಮನ ಕೃಪೆಗೆ ಪಾತ್ರರಾಗೋಣ ವೆಂದು ಕರೆನೀಡಿದರು.
ಈಸಂದರ್ಭದಲ್ಲಿ ತೋಟಹಳ್ಳಿ ಮಠದ ಬಸವಲಿಂಗ ಪ್ರಭುಸ್ವಾಮಿಗಳು, ಬಿಲ್ವಪತ್ರಮಠದ ಶಿವಲಿಂಗಸ್ವಾಮಿಗಳು, ಸಾತನೂರು ಮಠದ ನಿಜಗುಣಸ್ವಾಮಿಗಳು, ರಾಮಜನ್ಮಭೂಮಿ ತೀರ್ಥಟ್ರಸ್ಟ್‌ನ ಪವಿತ್ರ ಮಂತ್ರ್ರಾಕ್ಷತೆಯ ತಾಲೂಕು ಸಂಚಾಲಕ ಪಿ. ಕುಮಾರಸ್ವಾಮಿ, ಬಿಜೆಪಿ ಮುಖಂಡರಾದ ಮಂಜುನಾಥ್, ರಾಜೇಶ್, ಪ್ರದೀಪ್, ಅಭಿಷೇಕ್, ಕೃಷ್ಣ, ರವಿ, ತಾಲೂಕು ಬಿಜೆಪಿ ಅಧ್ಯಕ್ಷ ವೆಂಕಟೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ನಾಗರಾಜು, ಮುನಿಸಿದ್ದೇಗೌಡ, ಮರಿಗೌಡ, ಮುರುಳಿ ಸೇರಿದಂತೆ ಅನೇಕರು ಪಾಲ್ಗೋಂಡಿದ್ದರು.
ಜಕ್ಕೆಗೌಡನದೊಡ್ಡಿಯಿಂದ ಅಚ್ಚಲು, ತೋಟಹಳ್ಳಿಮಠ, ಸಾತನೂರು, ಕಾಡಹಳ್ಳಿ, ಹಲಸೂರು, ಹೊನ್ನಿಗಾನಹಳ್ಳಿ, ಕಬ್ಬಾಳು, ಅರೆಕಟ್ಟೆದೊಡ್ಡಿ, ಬೂಡಹಳ್ಳಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪವಿತ್ರ ಮಂತ್ರಾಕ್ಷತೆಯನ್ನು ವಿತರಿಸಲಾಯಿತು.