ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ರೈತರ ಕಡೆಗಣನೆ -ವೆಂಕಟರಾಮ್

ಕೋಲಾರ,ಜೂ,೧೬- ಸಹಕಾರಿ ಸಂಸ್ಥೆಗಳಲ್ಲಿ ರಾಜಕೀಯಕ್ಕೆ ಅವಕಾಶ ನೀಡದೆ ರೈತರ ಹಿತ ಕಾಯುವ ಬದ್ದತೆಯೊಂದಿಗೆ ಕಾಯನಿರ್ವಹಿಸ ಬೇಕೆಂದು ಇಫ್ಕೋ ಟೋಕಿಯೋ ವಿಮಾ ಕಂಪನಿ ಅಂತರರಾಷ್ಟ್ರೀಯ ಅಧ್ಯಕ್ಷ ಕೆ.ಶ್ರೀನಿವಾಸಗೌಡ ಕರೆ ನೀಡಿದರು
ತಾಲೂಕಿನ ವೇಮಗಲ್ ಹೋಬಳಿ ಮದ್ದೇರಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಿಂದ ನೂತನವಾಗಿ ತಾಲೂಕಿನ ಸೀತಿ ಗ್ರಾಮದಲ್ಲಿ ನೂತನ ದಾಸ್ತಾನು ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಡಿಸಿಸಿ ಬ್ಯಾಂಕ್ ದಿವಾಳಿ ಅಂಚಿನಲ್ಲಿದ್ದ ಸಂದರ್ಭ ಹಾಗೂ ಉತ್ತಮವಾಗಿ ಅಭಿವೃದ್ದಿ ಹೊಂದಿರುವುದನ್ನು ಎರಡನ್ನು ನಾವು ಕಂಡಿದ್ದೇವೆ. ದಿವಾಳಿ ಅಂಚಿನಲ್ಲಿದ್ದ ಸಂದರ್ಭದಲ್ಲಿ ಜಿಲ್ಲೆಯ ರೈತರಿಗೆ ಮತ್ತು ಮಹಿಳೆಯರಿಗೆ ಭಾರಿ ಅನ್ಯಾಯವಾಯಿತು, ಕೇಂದ್ರ ಮತ್ತು ರಾಜ್ಯ ಎರಡು ಸರ್ಕಾರಗಳ ಸಾಲ ಮನ್ನಾ ಯೋಜನೆಗಳಿಗೆ ನಮ್ಮ ಬ್ಯಾಂಕ್ ಆರ್ಹತೆ ಹೊಂದಿಲ್ಲದ ಕಾರಣ ಪ್ರಯೋಜನ ಇಲ್ಲದಂತಾಗಿತ್ತು ಎಂದು ನೆನಪಿಸಿದರು.
ಅದರೆ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರಾಗಿ ಬ್ಯಾಲಹಳ್ಳಿ ಗೋವಿಂದಗೌಡರು ಅಧಿಕಾರವಹಿಸಿ ಕೊಂಡ ನಂತರ ರಾಜ್ಯದಲ್ಲೇ ನಂ ಒನ್ ಸ್ಥಾನ ಪಡೆದು ಅತ್ಯುತ್ತಮವಾದ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು, ಜಿಲ್ಲೆಯ ರೈತರಿಗೆ ಮತ್ತು ಮಹಿಳೆಯರಿಗೆ ನಂತರದಲ್ಲಿ ಬಂದಂತ ಸಾಲ ಮನ್ನ ಯೋಜನೆಗೆ ಬ್ಯಾಂಕ್ ಆರ್ಹತೆ ಪಡೆಯುವಂತಾಯಿತು ಎಂದರು,
ರಾಜ್ಯ ಸರ್ಕಾರಜಾರಿಗೆ ತಂದ ಸಾಲ ಮನ್ನಾ ಯೋಜನೆಯಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಲ ರೈತರು ೩೮೦ ಕೋಟಿಗೂ ಅಧಿಕ ಸಾಲ ಮನ್ನಾ ಅಗಿದೆ ಇದರಿಂದ ರೈತರಿಗೆ ಪ್ರಯೋಜನವಾಯಿತು ಎಂದು ತಿಳಿಸಿದರು,
ಮದ್ದೇರಿ ರೇಷ್ಮೆ ಬೆಳೆಗಾರರ ಸಹಕಾರದ ಸಂಘದ ಅಧ್ಯಕ್ಷ ಜಂಬಾಪುರ್ ವೆಂಕಟರಾಮ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಿಂದ ಯಾವುದೇ ರೀತಿಯ ಸಾಲ ಸೌಲಭ್ಯಗಳು ದೊರೆಯುತ್ತಿಲ್ಲ, ನಮ್ಮ ರೈತರು ಡಿಸಿಸಿ ಬ್ಯಾಂಕ್ ನಲ್ಲಿ ಸಾಲ ಸೌಲಭ್ಯ ಪಡೆಯುತ್ತಾರೆ, ಡೆಪಾಸಿಟ್ ಮಾಡುವಾಗ ಮಾತ್ರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾಡುತ್ತಾರೆ, ಇನ್ನು ಮುಂದೆ ಈ ರೀತಿ ಮಾಡಬೇಡಿ ನೀವು ಇಡುವ ಠೇವಣಿಗೆ ಸೂಕ್ತ ಬಡ್ಡಿ ನೀಡುತ್ತೇವೆ ಜೊತೆಗೆ ಇನ್ನೊಬ್ಬ ರೈತರಿಗೆ ಅನುಕೂಲವಾಗುತ್ತದೆ ತಿಳಿಸಿದರು.
ಡಿಸಿಸಿ ಬ್ಯಾಂಕ್ ಹಿರಿಯ ನಿರ್ದೇಶಕ ಕಡಗಟ್ಟೂರು ದಯಾನಂದ್ ಮಾತನಾಡಿ, ಡಿಸಿಸಿ ಬ್ಯಾಂಕ್‌ನಿಂದ ನಮ್ಮ ಪಂಚಾಯ್ತಿಯ ಎಲ್ಲಾ ಗ್ರಾಮದ ರೈತರಿಗೂ ಬಡ್ಡಿ ರಹಿತ ಸಾಲ ನೀಡಿ ರೈತರು ಆರ್ಥಿಕತೆಯಲ್ಲಿ ಮುಂದೆ ಬರಲು ಸಹಕಾರಿಯಾಗಿದೆ, ಅದೇ ರೀತಿ ನಮ್ಮ ಮದ್ದೇರಿ ರೇಷ್ಮೆ ಬೆಳೆಗಾರರ ಸಹಕಾರ ಸಂಘದಲ್ಲಿ ಮಹಿಳೆಯರು ಉತ್ತಮ ಠೇವಣಿ ನೀಡುತ್ತಿದ್ದಾರೆ ಅವರಿಗೆ ನಮ್ಮ ಬ್ಯಾಂಕಿನಿಂದ ಸಾಲ ಸೌಲಭ್ಯವನ್ನು ಸಹ ನೀಡಿದ್ದೇವೆ ಅವರಿಂದ ಉತ್ತಮ ರೀತಿಯಲ್ಲಿ ಮರುಪಾವತಿ ಆಗುತ್ತಿದೆ ಇದೇ ರೀತಿ ಸಂಘವನ್ನು ಮುನ್ನಡೆಸಿದರೆ ಪಂಚಾಯಿತಿಯ ಎಲ್ಲಾ ಮಹಿಳೆಯರಿಗೂ ಸಾಲ ನೀಡಲು ಸಾಧ್ಯವಾಗುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್, ಸೀತಿ ಗ್ರಾ.ಪಂ ಅಧ್ಯಕ್ಷೆ ಸೀತಾಲಕ್ಷ್ಮಮ್ಮ, ಉಪಾಧ್ಯಕ್ಷೆ ಮಂಜುಳಾ, ಸದಸ್ಯ ಮುನಿರಾಜು, ರೇಷ್ಮೆ ಬೆಳೆಗಾರರ ಸಹಕಾರ ಸಂಘದ ಉಪಾಧ್ಯಕ್ಷ ನಾರಾಯಣಸ್ವಾಮಿ, ಎಂ.ವೆಂಕಟಸ್ವಾಮಿ, ಮುನಿರಾಮಕ್ಕ, ಮಾಜಿ ಅಧ್ಯಕ್ಷ ಗೋಪಾಲ್ ರೆಡ್ಡಿ, ಮಠಪುರ ಶ್ರೀನಿವಾಸ್, ಬೈರೇಗೌಡ, ಜೂಟ್ಟು ರಮೇಶ್, ಸಂಘದ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಭಾಸ್ಕರ್ ಮುಂತಾದವರು ಇದ್ದರು.