ರಾಷ್ಟ್ರಮಟ್ಟದ ವೇಟ್ ಲಿಪ್ಟಿಂಗ್ ಓಪನ್ ಕ್ರೀಡಾಪಟುಗಳು ವಿಜಯಪುರ ಜಿಲ್ಲಾ ಕ್ರೀಡಾಪಟುಗಳು ಆಯ್ಕೆ

ವಿಜಯಪುರ, ಜು.22:ರಾಷ್ಟ್ರಮಟ್ಟದ ವೆಟ್ ಲಿಪ್ಟಿಂಗ್ ಓಪನ್ ಕ್ರೀಡಾಪಟುಗಳು ವಿಜಯಪುರ ಜಿಲ್ಲಾ ವಿದ್ಯಾರ್ಥಿಗಳು ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ರಾಷ್ಟ್ರಮಟ್ಟದ ವೇಟ್ ಲಿಪ್ಟಿಂಗ್ ಸ್ಪರ್ಧೆಯು ದಿ.21-08-2021 ರಿಂದ 23 ರವರೆಗೆ ಮೂರು ದಿನಗಳ ವರೆಗೆ ನಡೆಯಲಿರುವ ಕ್ರೀಡೆಯಲ್ಲಿ ವಿಜಯಪುರ ಜಿಲ್ಲೆಯ ಕ್ರೀಡಾ ಪಟುಗಳಾದ ಪುರುಷರ ವಿಭಾಗದಲ್ಲಿ ಶರೀಫ, ರವಿ, ಆನಂದ, ಶಿವಾನಂದ, ಈರಣ್ಣ, ಆಕಾಶ, ಮುದೆಪ್ಪ, ಶಿವು, ಶಿವಲಿಂಗ, ಅನೀಲ, ಓವೈಸ್ ಮುಸ್ತಾಕ ಆಲಮೇಲ ಭಾಗವಹಿಸಲಿದ್ದಾರೆ.
ಮಹಿಳಾ ವಿಭಾಗದಲ್ಲಿಃ ರಂಜನಾ ಹಾಲ ಗುಣಿ, ನವೀನಾ ಕಾಂಬಳೆ, ಭೀಮಾಬಾಯಿ ಹಡಪದ, ಪ್ರಿಯಾಂಕಾ ಶಿಂಧೆ, ಶ್ರೀದೇವಿ ಮಾದರ, ರಾಜಶ್ರೀ ಶೆಡಬಾಲೆ, ಲಕ್ಷ್ಮೀ ಕುಲಗೊಂಡ, ಶಾಂತಮ್ಮಾ, ಪ್ರಭಾ, ಹೀನಾ, ಪ್ರೀಯಾಂಕಾ ಭಾಗವಹಿಸಲಿದ್ದಾರೆ.
ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆ ವೇಟ್ ಲಿಫ್ಟಿಂಗ್ ಅಸೋಶಿಯೇಶನ್ ವಿಜಯಪುರ ವತಿಯಿಂದ ಕ್ರೀಡಾಪಟುಗಳಿಗೆ ಅಭಿನಂದಿಸಿದರು.
ವೇಟ್ ಲಿಪ್ಟಿಂಗ್ ಅಸೋಶಿಯೇಶನ್ ಅಧ್ಯಕ್ಷರಾದ ದಾದಾಸಾಹೇಬ ಸಿದ್ದಪ್ಪ ಬಾಗಾಯತ, ಕಾರ್ಯದರ್ಶಿ ಚಂದ್ರಕಾಂತ ತಾರನಾಳ, ತರಬೇತಿದಾರರಾದ ಶಂಕರ ಲಡಂಗಿ, ಶಶಿಕುಮಾರ ದಿಲೀಪ ಬಾಗಾಯತ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.