ರಾಷ್ಟ್ರಮಟ್ಟದ ರಾಕ್ ಬಾಲ್ ಕ್ರೀಡಾಕೂಟ: ವಿಜಯಪುರ ಜಿಲ್ಲೆಯ ಬಾಲಕ ಬಾಲಕಿಯರು ಆಯ್ಕೆ

ವಿಜಯಪುರ, ಎ.17-ರಾಜ್ಯಸ್ಥಾನದಲ್ಲಿ ದಿನಾಂಕ : ಎಪ್ರೀಲ್ 21, 22, 23 ಮೂರು ದಿನಗಳ ವರೆಗೆ ನಡೆಯುವ ರಾಷ್ಟ್ರಮಟ್ಟದ ರಾಕ್ ಬಾಲ್ ಕ್ರೀಡೆಯಲ್ಲಿ ವಿಜಯಪುರ ಜಿಲ್ಲೆಯ ಬಾಲಕ ಬಾಲಕಿಯರು ಆಯ್ಕೆಯಾಗಿ ವಿಜಯಪುರ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಕರ್ನಾಟಕ ಟೀಂನಲ್ಲಿ ಕ್ಯಾಪ್ಟನ್ ಕಾಂಚನಾ ರಾಜಕುಮಾರ, ಮಾಳಿ ಹಾಸಂಗಿ, ಹೀನಾ ಬೇಗಂ, ಹಸನ್ ಸಾಬ್ ವಣಿಕ್ಯಾಳ, ಐಶ್ವರ್ಯ, ಗುರಸಿದ್ದಯ್ಯ ಹಿರೇಮಠ, ಭಾಗ್ಯಶ್ರೀ, ಮುತ್ತಪ್ಪ ಉಪ್ಪಾರ, ಮೊಹಮ್ಮದ ಜೈದ್ ಮೊಹಮ್ಮದ ಸಲೀಮ ಮಕಾನದಾರ ಕ್ರೀಡೆಯಲ್ಲಿ ಭಾಗವಹಿಸಲದ್ದಾರೆ. ಈ ವಿದ್ಯಾರ್ಥಿಗಳಿಗೆ ಚಂದ್ರಕಾಂತ ಮಹಾದೇವಪ್ಪ ತಾರನಾಳ ತರಬೇತಿ ನೀಡಿದ್ದಾರೆ. ಕ್ರೀಡಾ ಸಬಲೀಕರಣ ನಾಮ ನಿರ್ದೇಶಕ ಸದಸ್ಯರಾದ ದಾದಾಸಾಹೇಬ ಸಿದ್ದಪ್ಪ ಬಾಗಾಯತ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.