
ಕಲಬುರಗಿ,ಆ.19:ಇತ್ತಿಚೆಗೆ ಬೆಂಗಳೂರಿನ ಶಿವಜ್ಯೋತಿ ಯೋಗ ಕೇಂದ್ರದ ವತಿಯಿಂದ ದಿನಾಂಕ 4, 5 ಹಾಗೂ 6, ಆಗಷ್ಟ್ 2023 ರಂದು ಹಮ್ಮಿಕೊಂಡ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಕಲಬುರಗಿಯ ಭೂಮಿ ಯೋಗ ಫೌಂಡೇಶನ ಟ್ರಸ್ಟ್‍ನ ವಿದ್ಯಾರ್ಥಿಗಳಾದ ಕು. ನೇಸರ ಎನ್. ಗುತ್ತೇದಾರ ಮತ್ತು ಕು. ಅನುಶ್ರೀ ಎನ್. ಗುತ್ತೇದಾರ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆಯುವುದರ ಮೂಲಕ ಸಾಧನೆಯನ್ನು ಮಾಡಿದ್ದಾರೆ. ಈ ಸಾಧನೆಯು ಪ್ರಮಾಣ ಪತ್ರ ಹಾಗೂ ಫಲಕವನ್ನು ಒಳಗೊಂಡಿದೆ.
ಈ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯ 8 ರಿಂದ 12 ವರ್ಷದ ಮಕ್ಕಳ ಸ್ಪರ್ಧೆಯಲ್ಲಿ ಕು. ಅನುಶ್ರೀ ಎನ್. ಗುತ್ತೇದಾರ ಹಾಗೂ 12 ರಿಂದ 15 ವರ್ಷದ ಮಕ್ಕಳ ಸ್ಪರ್ಧೆಯಲ್ಲಿ ಕು. ನೇಸರ ಎನ್. ಗುತ್ತೇದಾರ ದ್ವತೀಯ ಸ್ಥಾನವನ್ನು ಪಡೆದಿದ್ದಾರೆ. ಈ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳಿಂದ ಸುಮಾರು 300ಕ್ಕೂ ಹೆಚ್ಚಿನ ಸ್ಪರ್ಧಿಗಳು ಭಾಗವಹಿಸಿದ್ದರು. ಕಲ್ಯಾಣ ಕರ್ನಾಟಕ ಭಾಗದ ಮಕ್ಕಳು ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ದ್ವತೀಯ ಸ್ಥಾನ ಪಡೆದಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ. ಮಕ್ಕಳು ಮುಂದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಸಾಧನೆ ಮಾಡಲಿ ಎಂದು ಭೂಮಿ ಯೋಗ ಫೌಂಡೇಶನ್ ಟ್ರಸ್ಟನ್ ಅಧ್ಯಕ್ಷರಾದ, ನಾಗರಾಜ ಆರ್. ಸಾಲೋಳ್ಳಿ, ಕಾರ್ಯದರ್ಶಿಗಳಾದ ಶ್ರೀಮತಿ. ವಿಶಾಲಾಕ್ಷಿ ಬಿ. ಘಂಟಿ, ತಂದೆ-ತಾಯಿಯರಾದ ಶ್ರೀಮತಿ. ಲಕ್ಷ್ಮೀ ಮತ್ತು ಶ್ರಿ. ನರಸಯ್ಯಾ ಗುತ್ತೇದಾರ ಹಾಗೂ ಸಮಸ್ತ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಕಾಂತ ಸಿಂಪಿ, ಮಲ್ಲಿಕಾರ್ಜುನ ಬುಳ್ಳಾ, ಸಿದ್ಧರಾಮ ಪಾಟೀಲ್, ಗಣೇಶ ಆರ್. ಎಸ್., ಡಾ. ಸಂದೀಪ ಬಿ. ಹಾಗೂ ಡಾ. ಶಿವಶರಣಪ್ಪಾ ನೀಲೂರಕರ್ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.