ರಾಷ್ಟ್ರಮಟ್ಟದ ಭಾರತೀಯ ಸಂಸ್ಕøತಿ ಉತ್ಸವಮೂಲಿಮನಿ ಫೌಂಡೇಷನನಿಂದ ರೂ. 1 ಲಕ್ಷ ದೇಣಿಗೆ

ಬೀದರ್:ಮೇ.28: ವಿಕಾಸ ಅಕಾಡೆಮಿಯು 2025 ರ ಜನವರಿ 29 ರಿಂದ ಫೆಬ್ರುವರಿ 6 ರ ವರೆಗೆ ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ಭಾರತೀಯ ಸಂಸ್ಕøತಿ ಉತ್ಸವಕ್ಕೆ ಪೆÇ್ರ. ಬಿ.ಜಿ. ಮೂಲಿಮನಿ ಫೌಂಡೇಷನ್ ರೂ. 1 ಲಕ್ಷ ದೇಣಿಗೆ ನೀಡಿದೆ.
ಕಲಬುರಗಿಯಲ್ಲಿ ನಡೆದ ಭಾರತೀಯ ಸಂಸ್ಕøತಿ ಉತ್ಸವದ ಪೂರ್ವ ಭಾವಿ ಸಿದ್ಧತಾ ಸಭೆಯಲ್ಲಿ ಪೆÇ್ರ. ಬಿ.ಜಿ. ಮೂಲಿಮನಿ ಫೌಂಡೇಷನ್ ಅಧ್ಯಕ್ಷ ಶಿವಲಿಂಗಪ್ಪ ಜಲಾದೆ ಹಾಗೂ ಕಾರ್ಯದರ್ಶಿ ರೇಣಸಿದ್ದಪ್ಪ ಜಲಾದೆ ಅವರು ಉತ್ಸವ ಹಾಗೂ ವಿಕಾಸ ಅಕಾಡೆಮಿಯ ಮುಖ್ಯ ಸಂಯೋಜಕ ಬಸವರಾಜ ಪಾಟೀಲ ಸೇಡಂ ಅವರಿಗೆ ದೇಣಿಗೆಯ ಚೆಕ್ ಹಸ್ತಾಂತರಿಸಿದರು.
ವಿಕಾಸ ಅಕಾಡೆಮಿಯ ಬೀದರ್ ಜಿಲ್ಲಾ ಸಂಚಾಲಕ, ನಿವೃತ್ತ ಕರ್ನಲ್ ಶರಣಪ್ಪ ಸಿಕೇನಪುರ, ಕಲಾವಿದ ಜೆ.ಎಸ್. ಖಂಡೇರಾವ್, ಶಾಂತರೆಡ್ಡಿ ಇದ್ದರು.