ರಾಷ್ಟ್ರಮಟ್ಟದ ಪ್ರಶಸ್ತಿಗೆ ಕೇಂಬ್ರಿಡ್ಜ್ ಶಾಲೆ ಭಾಜನ

ಲಿಂಗಸುಗೂರು,ಜ.೧೧- ಪಟ್ಟಣದ ಕೇಂಬ್ರಿಡ್ಜ್ ಪ್ರಾಥಮಿಕ ಮತ್ತು ಪ್ರೌಢ ೨೦೨೨-೨೩ನೇ ಸಾಲಿನ ರಾಷ್ಟ್ರ ಮಟ್ಟದ ೫೦೦ ಶಾಲೆಗಳ ಪೈಕಿ ಅತ್ಯುತ್ತಮ ಎಂದು ಗುರುತಿಸಿ ಬ್ರೇನ್ ಫೀಡ್ ಸಂಸ್ಥೆಯು ರಾಷ್ಟ್ರ ಮಟ್ಟದ ಸ್ಕೂಲ್ ಎಕ್ಸಲೆನ್ಸ್ ಪ್ರಶಸ್ತಿಗೆ ಭಾಜನವಾಗಿದೆ. ಹೈದ್ರಾಬಾ ದ್‌ನಲ್ಲಿ ಜ.೪ ಮತ್ತು ೫ ರಂದು ಜರುಗಿದ ರಾಷ್ಟ್ರ ಮಟ್ಟದ ಸಮಾವೇಶದಲ್ಲಿ ೫೦೦ ಶಾಲೆಗಳ
ಪಟ್ಟಿಯಲ್ಲಿ ಸದರಿ ಶಾಲೆ ಆಯ್ಕೆಯಾದ ಪ್ರಯುಕ್ತ ಸಂಸ್ಥೆ ಮುಖ್ಯಸ್ಥ ಮಹಾಂತೇಶ ಗೌಡರಗೆ ಪ್ರಶಸ್ತಿ ಶಾಲೆಯು ನೀಡಿ ಗೌರವಿಸಲಾಯಿತು. ಶಾಲೆಯ ಭೌತಿಕ ಸ್ಥಿತಿ, ಪರಿಸರ, ಮಕ್ಕಳ ಕಲಿಕಾ ವಿಧಾನ, ಪಠ್ಯ -ಪತ್ಯೇತರ ಚಟುವಟಿಕೆ, ಶೈಕ್ಷಣಿಕ ಸಾಧನೆ, ಮಕ್ಕಳ ಕ್ರೀಯಾಶೀಲತೆ ಬಗ್ಗೆ ಅಧ್ಯಯನ ನಡೆಸಿ ಪ್ರಶಸ್ತಿ ಲಭಿಸಿದೆ. ನಿವೃತ್ತ ಐಪಿಎಸ್ ಅಧಿಕಾರಿ ಗೋಪಿನಾಥ, ಬ್ರೇನ್ ಫೀಡ್ ಮುಖ್ಯಸ್ಥ ಬ್ರಾಹ್ಮಮ್ ಸ್ಥಳಿಯ ಶಾಸಕರು ಇತರರಿದ್ದರು.