ರಾಷ್ಟ್ರಮಟ್ಟದ  ಟೆನಿಸ್ ಗೆ ಈಶ್ವರಮ್ಮ ಶಾಲೆಯ ವಿದ್ಯಾರ್ಥಿಗಳು ಆಯ್ಕೆ.   

ದಾವಣಗೆರೆ.ನ.೨೪:   ರಾಜ್ಯಮಟ್ಟದ ಲಾನ್ ಟೆನಿಸ್ 14 ವರ್ಷದೊಳಗಿನ ವಯೋಮಿತಿಯ ಪಂದ್ಯಾವಳಿಯಲ್ಲಿ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಶ್ರೇಯಂತ. ಎಂ ಮತ್ತು ತರುಣ್. ಹೆಚ್ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ರ್ಯಾಂಕ್ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗಳಿಗೆ ಶಾಲಾ ಅಧ್ಯಕ್ಷರಾದ  ಸುಜಾತ ಕೃಷ್ಣ ಕಾರ್ಯದರ್ಶಿಗಳಾದ  ಉಷಾರಂಗನಾಥ್, ಶಾಲಾ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಮತ್ತು  ಪ್ರಾಂಶುಪಾಲರಾದ ಕೆ. ಎಸ್ ಪ್ರಭುಕುಮಾರ್, ಉಪ ಪ್ರಾಂಶುಪಾಲರಾದ  ಜಿ ಎಸ್ ಶಶಿರೇಖಾ ಮತ್ತು ದೈಹಿಕ ಶಿಕ್ಷಕರಾದ ಶ್ರೀ ರವಿ ಕೆ.  ನಾಗರಾಜ್ ಉತ್ತಂಗಿ ಪ್ರಸನ್ನ ಎಂ ಹಾಗೂ  ಎಲ್ಲಾ ಶಿಕ್ಷಕರು ಅಭಿನಂದಿಸಿದ್ದಾರೆ.                    .