ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜಿಲ್ಲೆಯ ಗೋಲ್ಡನ್ ಸ್ಟಾರ್ ಕರಾಟೆ ವಿದ್ಯಾರ್ಥಿಗಳ ಸಾಧನೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಫೆ.೧೪: ಬ್ರಿಟ್ ಸ್ಟಾರ್ ಕರಾಟೆ ಸಂಸ್ಥೆಯವರು ಚಿತ್ರದುರ್ಗದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಫ್‌ನಲ್ಲಿ ದಾವಣಗೆರೆಯ ನಿಹಾನ್ ಶೋಟೋಕಾನ್ ಕರಾಟೆ ಸಂಸ್ಥೆಯ ಸಹಯೋಗದ ಗ್ಲೋಬಲ್ ಸ್ಟಾರ್ ಕರಾಟೆ ವಿದ್ಯಾರ್ಥಿಗಳು ಭಾಗವಹಿಸಿ ಕತಾ ಮತ್ತು ಕುಮಿತೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ಎಂ.ವರ್ಷಎಲ್.ಆರ್. ಲಿಖಿತ್ ಗೌಡ್,ಆರ್. ಆರಾಧ್ಯ ಇವರುಗಳು ಕತಾ ಮತ್ತು ಕುಮಿತೆ ವಿಭಾಗದಲ್ಲಿ ಪ್ರಥಮ ಮತ್ತು ಎ.ಎಂ. ರೋಹನ್ ಕತಾ ಪ್ರಥಮ, ಕುಮಿತೆ ದ್ವಿತೀಯ ಹಾಗೂ ಬಿ. ತನ್ಮಯಿ ಮತ್ತು ಡಿ.ಹರ್ಷ ಕತಾ ಹಾಗೂ ಕುಮಿತೆ ವಿಭಾಗದಲ್ಲಿ ತೃತೀಯ ಬಹುಮಾನಗಳನ್ನು ಪಡೆದಿದ್ದಾರೆ. ಪಿ. ರಾಮಚಂದ್ರ ಪಿ ಇವರು ತರಬೇತಿ ನೀಡಿದ್ದರು ಎಂದು ಸಂಸ್ಥೆಯ ಮುಖ್ಯ ತರಬೇತುದಾರರಾದ ಆನಂದ್ ಮುದಲಿಯಾರ್ ತಿಳಿಸಿದ್ದಾರೆ.