ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೨೨: ಗದಗದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ದಾವಣಗೆರೆಯ ಅಮೃತವಾಯಿ ಶಾಲೆಯ ಬಳಿ ಇರುವ ಅಯ್ ಕರಾಟೆ ಟೀಂನ ಕರಾಟೆ ತರಬೇತುದಾರರಾದ ಸೆನ್ಸಾಯ್ ಎಸ್. ಇಮ್ತಿಯಾಜ್ ಇವರ ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ.ಫ್ಲಯ್ಟಿಂಗ್ ವಿಭಾಗದಲ್ಲಿ ಸಂಗಮೇಶ್ ಸ್ವಾಮಿ, ಎಸ್. ಬಿ. ಅನಿಕೇತ್, ಸಾಯಿಕಿಶನ್ ಪ್ರಥಮ ಸ್ಥಾನ ಪಡೆದಿದ್ದು, ದ್ವಿತೀಯ ಸ್ಥಾನದಲ್ಲಿ ಅಮೃತ, ಸೂರ್ಯಮನೆ, ಹರ್ಷಿತ, ಜಿ.ವಿ. ಪ್ರಜ್ವಲ್, ಎಸ್. ಬಿ. ಆಕಾಂಕ್ಷ, ತೃತೀಯ ಸ್ಥಾನದಲ್ಲಿ ಸಿ. ನವ್ಯ, ಅಫಿಯನುಜುದ್, ನಿಕಿಲ್, ಎ. ಯಶ್ ಹವಳೆ. ಕತಾಸ್ ವಿಭಾಗದಲ್ಲಿ ಸಂಗಮೇಶ್ ಸ್ವಾಮಿ, ಸಾಯಿಸಿದ್ದಾರ್ಥ್, ಚಂದ್ರಶೇಖರ್ ಪ್ರಥಮ ಸ್ಥಾನದಲ್ಲಿ ಜಯಗಳಿಸಿದ್ದು, ದ್ವಿತೀಯ ಸ್ಥಾನದಲ್ಲಿ ಅಸ್ಫರ್ ದಾನಿಶ್ ಖಾನ್, ಹರ್ಷಿತ, ಎಸ್.ಬಿ. ಆಕಾಂಕ್ಷ, ಎಸ್.ಬಿ. ಅನಿಕೇತ್, ಅಮೃತ, ಜಿ.ವಿ. ಪ್ರಜ್ವಲ್, ಯಶ್ ಎ.ಹವಳೆ. ತೃತೀಯ ಸ್ಥಾನದಲ್ಲಿ ಸಿ. ನವ್ಯ, ಸಮನ್ವಿತ, ಅಫಿಯ ನುಜುದ್, ವರ್ಷಿಣಿ ಎಮ್, ಸಾಯಿ ಕಿಶನ್, ನಿಕಿತ್, ಎನ್. ಐಶ್ವರ್ಯ, ಸೂರ್ಯಮನೆ, ಎಮ್. ವೈಷ್ಣವಿ, ಪಿ. ಅಕುಲ್ ಗೆಲುವು ಕಂಡಿದ್ದಾರೆ.