ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪುಣ್ಯಸ್ಮರಣೆ

ಕಲಬುರಗಿ:ಜ.30: ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ ಪುಣ್ಯಸ್ಮರಣೆಯನ್ನು ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ನಗರದ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ಮಂಗಳವಾರ ಸಂಜೆ ಆಚರಿಸಲಾಯಿತು.
ಮೌನಾಚರಣೆ ಸಲ್ಲಿಸಲಾಯಿತು. ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಪ್ರಮುಖರಾದ ಸೈಯದ್ ಹಮೀದ್, ಸೋಹೆಲ್ ಶೇಖ್, ವಿನಾಯಕ ಹಿರೇಮಠ, ಆದರ್ಶ ತಿವಾರಿ, ಶಿವಕುಮಾರ ಕಂಠಿಕಾರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.