ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮೂರ್ತಿ ಅನಾವರಣ

ಜೇವರ್ಗಿ :ನ.18:ಅಹಿಂಸ ಚಳುವಳಿ ಮುಖಾಂತರ ದೇಶಕ್ಕೆ ಸ್ವಾತಂತ್ರ್ಯ ಕೊಟ್ಟ ಮಹಾ ನೇತ ರಾಷ್ಟ್ರಪಿತ ಮಹಾತ್ಮ ಗಾಂಧಿ ಎಂದು ಶಾಸಕ ಡಾಕ್ಟರ್ ಅಜಯಸಿಂಗ ಹೇಳಿದರು.
ತಾಲೂಕಿನ ನೆಲೋಗಿ ಗ್ರಾಮದಲ್ಲಿ ಮಹಾತ್ಮ ಗಾಂಧೀ ಯುವಕರ ಸಂಘ ಹಾಗೂ ನೆಲೋಗಿ ಗ್ರಾಮಸ್ಥರ ವತಿಯಿಂದ ರಾಷ್ಟ್ರಪಿತಾಮಹ ಶ್ರೀ ಮಹಾತ್ಮ ಗಾಂಧೀಜಿರವರ ಪುತ್ತಳಿ ಅನಾವರಣ ಕಾರ್ಯಕ್ರಮದ ಉದ್ಘಾಟನೆ ಮಾಡಿ ನೇರವೆರಿಸಲಾಯಿತು. ಸಾನಿಧ್ಯ ಸಿದ್ದಲಿಂಗ ಮಹಾ ಸ್ವಾಮಿಗಳು ವಹಿಸಿದರು ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್ ಜೆಡಿಎಸ್ ಮುಖಂಡ ವಿಜಯ್ ಕುಮಾರ್ ಹಿರೇಮಠ ಗ್ರಾಮ್ ಪಂಚಾಯಿತಿ ಅಧ್ಯಕ್ಷ ಬೈಲಾಪ್ಪ ನೇದಲಗಿ ತಾಲೂಕ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ರಾಜಶೇಖರ್ ಸಾಹುಕಾರ್ ಸೀರಿ ತಾಲೂಕ ಬಿಜೆಪಿ ಅಧ್ಯಕ್ಷ ಭೀಮರಾಯ ಗುಜಗೋಡ್ ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರ ಗುರುಲಿಂಗಪ್ಪ ಗೌಡ ಮಾಲಿ ಪಾಟೀಲ್ ಕಾಂಗ್ರೆಸ್ ಮುಖಂಡ ಗಿರಿಯಪ್ಪ ಗೌಡ ವಿವಿಧ ಇಲಾಖೆಯಲ್ಲಿ ನೇಮಕಗೊಂಡ ನೆಲೋಗಿ ಗ್ರಾಮದರವರಿಗೆ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ನೆಲೋಗಿ ಗ್ರಾಮದ ಎಲ್ಲಾ ಸಮಾಜದ ಹಿರಿಯರು ಹಾಗೂ ಮುಖಂಡರು ಸಂಘಸಂಸ್ಥೆಗಳ ಎಲ್ಲಾ ಸದಸ್ಯರುಗಳು ಮತ್ತು ನೆಲೋಗಿ ಗ್ರಾಮ ಪಂಚಾಯತಿ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು