
ಕೋಲಾರ,ಮೇ.೪-ನವಮಾಸಗಳು ತುಂಬಿದ ಮಗು ತಾಯಿ ಗರ್ಭದಿಂದ ಹೊರಬರುವಾಗ ತಾಯಿ ಅನುಭವಿಸುವ ಯಾತನೇ ಯಾವೊಬ್ಬ ಕಾರ್ಮಿಕರು ಅನುಭವಿಸಿರುವುದಿಲ್ಲ ಆದಕಾರಣ ನಾವೆಲ್ಲರೂ ಮಾತೃದೇವೋಭವ ಎಂದು ಸದಾ ಸ್ಮರಿಸಬೇಕು. ಸಮಾಜದಲ್ಲಿ ಪ್ರತಿ ವೃತ್ತಿಯೂ ಶ್ರೇಷ್ಠವೇ ರಾಷ್ಟ್ರ ಪತಿಯ ಹುದ್ದೆ ಮತ್ತು ಸಪಾಯಿ ಕರ್ಮಚಾರಿ ಮಾಡುವ ವೃತ್ತಿಗಳೆರಡಕ್ಕು ಸಮಾನ ಮೌಲ್ಯವಿದೆ.ವೃತ್ತಿಗಳಲ್ಲಿ ಮೇಲೆ ಕೀಳೆಂಬ ಬೇದ ಭಾವತೋರಬಾರದೆಂದು ಬಸವಣ್ಣ ನವರು ಕಾಯಕವೇ ಕೈಲಾಸವೆಂದು ಜಗತ್ತಿಗೆ ಸಾರಿದರು ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಮೂಹ ವಿದ್ಯಾ ಸಂಸ್ಥೆ ಸಂಸ್ಥಾಪಕರಾದ ಡಾ: ಎಂ.ಚಂದ್ರಶೇಖರ್ ತಿಳಿಸಿದರು
ಕೋಲಾರ-ಬಂಗಾರಪೇಟೆ ಮುಖ್ಯರಸ್ತೆಯಲ್ಲಿನ ಹಂಚಾಳಗೇಟ್ ಶ್ರೀ ಸಿದ್ದಾರ್ಥ ಪಾಲಿಟೆಕ್ನಿಕ್ ಮತ್ತು ಚೈತನ್ಯ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕಾರ್ಮಿಕರ ದಿನಾಚರಣೆಯ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಮಾತೃದೇವೋಭವ, ಪಿತೃದೇವೋಭವ, ಗುರುದೇವೋಭವ ಎಂದು ಮೊದಲಿಗೆ ಮಾತೃವನ್ನು ನೆನಪಿಸಿಕೊಂಡು
ಪ್ರತಿ ಕಾರ್ಯವು ನಿಷ್ಠೆಯಿಂದ ಮಾಡಿದರೆ ಕಾಯಕದಲ್ಲೇ ದೇವರನ್ನು ಕಾಣಬಹುದು. ಬ್ರಿಟೀಷರ ಅವಧಿಯಲ್ಲಿ ದಿನದ ೧೪ ಗಂಟೆಗಳ ಕಾಲ ಕಾರ್ಮಿಕರು ಅವಿರತವಾಗಿ ದುಡಿಯಬೇಕಾಗಿತ್ತು ಈ ಅವದಿಯಲ್ಲಿ ಕಾರ್ಮಿಕರಿಗೆ ದುಡಿಮೆಗೆ ತಕ್ಕ ಪ್ರತಿಫಲ ಸಿಗದೆ ಕಾರ್ಮಿಕರು ಮಾಲೀಕರಿಂದ ಶೋಷಣೆ ಅನುಭವಿಸುವಂಥಹ ಅವಧಿಯಾಗಿತ್ತು ಎಂದರು.
ಕಳೆದ ೧೯೪೭ರ ಸ್ವತಂತ್ರ್ಯ ನಂತರ ಡಾ.ಬಿ.ಆರ್.ಅಂಬೇಡ್ಕರ್ ಕಾರ್ಮಿಕ ಸಚಿವರಾಗಿದ್ದ ಸಂದರ್ಭದಲ್ಲಿ ದಾನಾಭಾಗ್‌ನ ಕಲ್ಲಿದ್ದಲು ಗಣಿಗೆ ಬೇಟಿ ನೀಡಿದ್ದಾಗ ಕಾರ್ಮಿಕ ಅವಿರತ ಶ್ರಮ, ಅವರ ಆರ್ಥಿಕ ಸ್ಥಿತಿ, ವಾಸದ ಪರಿಸರ ಇವೆಲ್ಲವನ್ನು ಮನಗಂಡು ದುಡಿಯುವ ಅವಧಿಯನ್ನು ೧೪ ರಿಂದ ೦೮ ಗಂಟೆ ಅವಧಿಗೆ ಇಳಿಸಿದರು ಎಂದು ಹೇಳಿದರು.
ಇನ್ನುಳಿದ ಸಮಯವನ್ನು ಕುಟುಂಬದ ಮತ್ತು ಮಕ್ಕಳ ಪಾಲನೆ ಪೋಷಣೆಗಾಗಿ ಮೀಸಲಿಡುವಂತೆ ಕಾಯ್ದೆ ರಚಿಸಬೇಕೆಂದು ಬ್ರಿಟೀಷರ ಸರ್ಕಾರಕ್ಕೆ ಮನವಿ ಅರ್ಪಿಸಿ ಕಾರ್ಮಿಕರ ಹಿತರಕ್ಷಣೆಗಾಗಿ ಕಾನೂನು ರಚಿಸಿದ ಮಾಹಾ ನಾಯಕರು ಈ ಕಾಯಿದೆ ವಿಶ್ವದ ಎಲ್ಲಾ ದೇಶದ ಕಾರ್ಮಿಕರಿಗೂ ಅನ್ವಯವಾಗುವಂತೆ ಜಾರಿಯಾಯಿತು ಎಂದು ತಿಳಿಸಿದರುನಾನು ಸಹ ಕೆ.ಇ.ಬಿಯಲ್ಲಿ ಗುತ್ತಿಗೆದಾರನಾಗಿ ನಿರಂತರ ೪೪ ವರ್ಷಗಳ ಸೇವೆ ಸಲ್ಲಿಸಿ ಜೆ.ಇ.ಯಾಗಿ ನಿವೃತ್ತಿಯಾಗಿರುತ್ತೇನೆ. ಕಾರ್ಮಿಕರ ಜೊತೆಗೂಡಿ ೨೫ ವರ್ಷಗಳ ಕಾಲ ಕಾರ್ಮಿಕ ಸಂಘಟನೆಗಳ ಮುಖ್ಯಸ್ಥರಾಗಿ ಲೀಡರ್ ಆಗಿ ಅನೇಕ ಸಮಸ್ಯೆಗಳನ್ನು ಪರಿಹರಿಸಿದ್ದೇನೆಂದು ವಿವರಿಸಿದರು.
ಸಮಾರಂಭದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಮೂಹ ವಿದ್ಯಾ ಸಂಸ್ಥೆಗಳ ಆಡಳಿತಾಧಿಕಾರಿಗಳು ಹಾಗೂ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಎಸ್. ಲಕ್ಷ್ಮೀನಾರಾಯಣರೆಡ್ಡಿ, ಐ ಟಿ ಐ- ಪಾಲಿಟೆಕ್ನಿಕ್ ನ ಪ್ರಾಂಶುಪಾಲರು ವಿದ್ಯಾರ್ಥಿಗಳು ಭಾಗವಹಿಸಿದ್ದ ಸಮಾರಂಭಕ್ಕೆ ಪ್ರಾರ್ಥನೆ ಶ್ರೀಮತಿ ಬಿಂದು, ಸ್ವಾಗತ ದಯಾನಂದ, ಡ್ಯಾನಿಯಲ್ ನಿರೂಪಿಸಿದರು.