ರಾಷ್ಟ್ರಪತಿ ಹುದ್ದೆಗೆ ಬುಡಕಟ್ಟು ಮಹಿಳೆ ಆಯ್ಕೆ ಬಿಜಿಪಿಯಿಂದ ಮಾತ್ರ ಸಾಧ್ಯ; ಬಿ.ಎಂ ಸತೀಶ್

ದಾವಣಗೆರೆ.ಜೂ.23:ರಾಷ್ಟçಪತಿ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯನ್ನಾಗಿ ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಿರುವುದು ದೇಶದ ಇತಿಹಾಸದಲ್ಲಿ ಪಪ್ರಥಮವಾಗಿ ಆದಿವಾಸಿ ಮಹಿಳೆ ದೇಶದ ಅತ್ಯುನ್ನತ ಸ್ಥಾನ ಅಲಂಕರಿಸುವಂತಾಗಿದೆ. “ಅಚ್ಚರಿಯ ಪರಂಪರೆ” ಮೂಲಕವೇ ಅತ್ಯಂತ ಬಡತನದಿಂದ ಬೆಳೆದು ಬಂದ  ಮಹಿಳೆಯನ್ನು ಈ ದೇಶದ ರಾಷ್ಟçಪತಿಯನ್ನಾಗಿ ಆಯ್ಕೆ ಮಾಡುತ್ತಿರುವುದು ಈ ದೇಶದ ಕಟ್ಟಕಡೆಯ ವ್ಯಕ್ತಿಗೂ ಸಂದ ಗೌರವವಾಗಿದೆ. ಇದು ಸಾಮಾಜಿಕ ನ್ಯಾಯದ ಪರಿಪಾಲನೆಯಾಗಿದೆ ಎಂದು ಮಾಜಿ ಎಪಿಎಂಸಿ ಅಧ್ಯಕ್ಷ ಹಾಗು ಬಿಜೆಪಿ ಮುಖಂಡ ಕೊಳೇನಹಳ್ಳಿ ಬಿ.ಎಂ.ಸತೀಶ್  ಹರ್ಷ ವ್ಯಕ್ತಪಡಿಸಿದ್ದಾರೆ.ಇತ್ತಿಚೆಗೆ ಜರುಗಿದ ರಾಜ್ಯದ ವಿಧಾನಪರಿಷತ್ ಚುನಾವಣೆಲ್ಲಿಯೂ ಸಹ ಬಿಜೆಪಿ ಎಸ್ಸಿಗೆ ಒಂದು, ಎಸ್ಟಿಗೆ ಒಂದು ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಒಂದು ಸ್ಥಾನ ನೀಡುವ ಮೂಲಕ ಸಾಮಾಜಿಕ ನ್ಯಾಯದ ಪರಿಪಾಲನೆಗೆ ನಾಂದಿ ಹಾಡಿತ್ತು. ಎಸ್ಟಿಗೆ ಸ್ಥಾನ ನೀಡಿದ್ದು ಕೊಪ್ಪಳದ ಸಾಮಾನ್ಯ ಬಿಜೆಪಿ ಕಾರ್ಯಕರ್ತೆಗೆ. ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಪರಿಶಿಷ್ಟ ವರ್ಗದ ಮಹಿಳೆ ವಿಧಾನ ಪರಿಷತ್ ಸದಸ್ಯರಾಗಿದ್ದು ಇದೇ ಮೊದಲು. ಇದಕ್ಕೆ ಬಿಜೆಪಿ ಕಾರಣ. ಮಾತು ಮಾತಿಗೂ ಅಹಿಂದ ಮಂತ್ರ ಜಪಿಸುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ರೀತಿಯ ಸಾಮಾಜಿಕ ನ್ಯಾಯದ ಪರಿಪಾಲನೆ ಮಾಡಿದ್ದು ಉದಾಹರಣೆ ಇಲ್ಲ. ಬಿಜೆಪಿ ಕೃತಿಯಲ್ಲಿ ಮಾಡಿದರೆ ಸಿದ್ದರಾಮಯ್ಯನವರು ಮಾತಿನಲ್ಲಿ ಮೋಡಿ ಮಾಡುವ ಜಾದುಗಾರ. ರಾಜ್ಯದ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್ಟಿ) ಬಡ ಕುಟುಂಬಗಳಿಗೆ ಗೃಹ ಬಳಕೆಗೆ ತಿಂಗಳಿಗೆ 75 ಯೂನಿಟ್ ವಿದ್ಯುತ್‌ನ್ನು ಉಚಿತವಾಗಿ ಪೂರೈಕೆ ಮಾಡುತ್ತಿದೆ. ಇದರಿಂದ ರಾಜ್ಯದ 36,26,065 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಟುಂಬಗಳಿಗೆ ಅನುಕೂಲವಾಗಿದೆ. ರಾಜ್ಯ ಸರ್ಕಾರ ಇಂಧನ ಇಲಾಖೆಗೆ ವಾರ್ಷಿಕ ರೂ.979 ಕೋಟಿ ಪಾವತಿಸುತ್ತದೆ. ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ ಹಾಗೂ ಜಾತಿ ಪ್ರಮಾಣಪತ್ರ ಮತ್ತು ಬ್ಯಾಂಕ್ ಖಾತೆ ವಿವರವನ್ನು ವಿದ್ಯುತ್ ಸರಬರಾಜು ಕಂಪನಿಗಳಿಗೆ ಸಲ್ಲಿಸಬೇಕು. ಪ್ರತಿ ತಿಂಗಳು ಬಿಲ್ ಆದಾಗ ಗ್ರಾಹಕರು ಪೂರ್ಣ ಮೊತ್ತವನ್ನು ಪಾವತಿಸಬೇಕು. ನೇರ ನಗದು ವರ್ಗಾವಣೆ ಯೋಜನೆಯಡಿ ಸಹಾಯಧನವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುವ ಮೂಲಕ ಫಲಾನುಭವಿಗಳಿಗೆ ಇಂಧನ ಇಲಾಖೆ ಮರುಪಾವತಿ ಮಾಡುತ್ತದೆ ಎಂದು  ಹೇಳಿದ್ದಾರೆ.