ಮೈಸೂರು: ಜು.01:- ರಾಷ್ಟ್ರಪತಿ ದ್ರೌಪದಿ ಮರ್ಮು, ಶಿಕ್ಷಣತಜ್ಞರಾದ ಎನ್.ರಾಮಚಂದ್ರಯ್ಯ, ವೆಂಕಟ ಲಕ್ಷ್ಮಿ ನರಸಿಂಹರಾಜು ಅವರಿಗೆ ಕರ್ನಾಟಕ ಮುಕ್ತವಿವಿಯು ಜು.2 ರ 18 ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಿದೆ.
ಈ ಕುರಿತು ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ಕುಲಪತಿ ಪೆÇ್ರ.ಶರಣಪ್ಪ ವಿ ಹಲಸೆ ವಿಶ್ವವಿದ್ಯಾನಿಲಯದ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಷ್ಟ್ರಪತಿ ಮರ್ಮು ಅವರು ಹಿಂದೆ ಶಿಕ್ಷಕರಾಗಿದ್ದರು. ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಬುಡಕಟ್ಟು ಸಮುದಾಯದವರಾಗಿ ಅವರ ಶೈಕ್ಷಣಿಕ ಸಾಧನೆ ಪರಿಗಣಿಸಿ ವಿವಿ ಈ ಗೌರವ ಡಾಕ್ಟರೇಟ್ ನೀಡುತ್ತಿದೆ ಎಂದರು.
ಜುಲೈ 2 ರಂದು ವಿಶ್ವ ವಿದ್ಯಾನಿಲಯದ 18ನೇ ವಾರ್ಷಿಕ ಘಟಿಕೋತ್ಸವ ನಡೆಯಲಿದೆ. ಘಟಿಕೋತ್ಸವ ಭವನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಬೆಂಗಳೂರಿನ ಶ್ರೀ ಲಕ್ಷ್ಮಿ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್ ಸಂಸ್ಥಾಪಕ ಮುಖ್ಯಸ್ಥರು. ದಕ್ಷ ಆಡಳಿಗಾರ ಮತ್ತು ಉತ್ತಮ ಸಮಾಜ ಸೇವಕರೆಂದು ಖ್ಯಾತರಾಗಿದ್ದಾರೆ. ತಮ್ಮ ಮಾಲೀಕತ್ವದ ಆಸ್ಪತ್ರೆಯಲ್ಲಿ 100 ಬಡ ಜನರಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ. ವೆಂಕಟ ಲಕ್ಷ್ಮಿ ನರಸಿಂಹ ರಾಜು ಖ್ಯಾತ ಶಿಕ್ಷಣ ತಜ್ಞ. ಆಕ್ಸಫರ್ಡ್ ಎಜುಕೇಷನಲ್ ಇನ್‍ಸ್ಟಿಟ್ಯೂಷನ್ ಮುಖ್ಯಸ್ಥರಾಗಿದ್ದಾರೆ. 22 ಶಿಕ್ಷಣ ಸಂಸ್ಥೆಗಳ 32 ಸಾವಿರ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಪ್ರತಿ ವರ್ಷ 500 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ.
8722 ವಿದ್ಯಾರ್ಥಿಗಳಿಗೆ ಪದವಿ:
ಘಟಿಕೋತ್ಸವವನ್ನು ಜು.2ರಂದು ಬೆಳಗ್ಗೆ 11 ಗಂಟೆಗೆ ಘಟಿಕೋತ್ಸವ ಭವನದಲ್ಲಿ ಹಮಿಕೊಳ್ಳಲಾಗಿದ್ದು, 2021-22ನೇ ಸೆಪ್ಟಂಬರ್-ಅಕ್ಟೋಬರ್ ಶೈಕ್ಷಣಿಕ ಸಾಲಿನ 8,722 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್, ಒಬ್ಬ ವಿದ್ಯಾರ್ಥಿಗೆ ಪಿಎಚ್.ಡಿ, 44 ಚಿನ್ನದ ಪದಕಗಳು, 27 ನಗದು ಬಹುಮಾನಗಳನ್ನು ನೀಡಲಾಗುವುದು. ಒಟ್ಟು 8722 ಅಭ್ಯರ್ಥಿಗಳಲ್ಲಿ 5241 ಮಹಿಳೆಯರು, 3481 ಪುರುಷರಿದ್ದಾರೆ ಎಂದು ತಿಳಿಸಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಉಪಸ್ಥಿತರಿರುವರು. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಅಶೋಕ್ ಎಸ್.ಕಿಣಗಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.
8722 ಅಭ್ಯರ್ಥಿಗಳು:
ಸ್ನಾತಕೋತ್ತರ ವಿಭಾಗದಲ್ಲಿ 7057 ವಿದ್ಯಾರ್ಥಿಗಳಿದ್ದು, ಈ ಪೈಕಿ ಮಹಿಳೆಯರು 4281, ಪುರುಷರು 2776, ಸ್ನಾತಕ ವಿಭಾಗದಲ್ಲಿ 959 ಮಹಿಳೆಯರು, 705 ಪುರುಷರು ಸೇರಿ ಒಟ್ಟು 8722 ಅಭ್ಯರ್ಥಿಗಳಿದ್ದಾರೆ. ರಾಜ್ಯ ಶಾಸ್ತ್ರ ವಿಭಾಗದಿಂದ ಓರ್ವ ಮಹಿಳಾ ಅಭ್ಯರ್ಥಿ ಪಿಎಚ್.ಡಿ ಪದವಿ ಪಡೆಯಲಿದ್ದಾರೆ.
ಶೇ.73.84 ಫಲಿತಾಂಶ:
2021-22ನೇ ಸೆಪ್ಟಂಬರ್-ಅಕ್ಟೋಬರ್ ಶೈಕ್ಷಣಿಕ ಸಾಲಿನಲ್ಲಿ 11812 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 8722 ಅಭ್ಯರ್ಥಿಗಳು ಉತ್ತೀರ್ಣರಾಗಿ ಶೇ.73.84 ಫಲಿತಾಂಶ ಬಂದಿದೆ ಎಂದು ಕುಲಪತಿ ವಿವರಿಸಿದರು.
ವಿಷಯಾವಾರು ಪದವಿ ಪಡೆದವರು:
ಸ್ನಾತಕೋತ್ತರ ವಿಭಾಗದ ಕನ್ನಡದಲ್ಲಿ 976, ಇಂಗ್ಲಿಷ್‍ನಲ್ಲಿ 713, ಹಿಂದಿ 173, ಸಂಸ್ಕೃತ 47, ಉರ್ದು 23, ಸ್ನಾತಕ ಪದವಿ ಬಿಎ 2757, ಇತಿಹಾಸ 943, ರಾಜ್ಯಶಾಸ್ತ್ರ 651, ಅರ್ಥಶಾಸ್ತ್ರ 474, ಸಮಾಜಶಾಸ್ತ್ರ 416, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ 73, ಸಾರ್ವಜನಿಕ ಆಡಳಿತ 75, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ 30. ಎಂ.ಕಾಂ 1729, ಬಿ.ಕಾಂ 1862, ಶಿಕ್ಷಣ ವಿಷಯಗಳಲ್ಲಿ ಬಿ.ಎಡ್ 472, ಎಂಎಲ್‍ಐಎಸ್ಸಿ 134, ಗಣಕವಿ ಜ್ಞಾನ 69, ಎಂಎಸ್ಸಿ ರಸಾಯನಶಾಸ್ತ್ರ 43, ಗಣಿತಶಾಸ್ತ್ರ 30, ಪರಿಸರ ವಿಜ್ಞಾನ 35, ಮಾಹಿತಿ ವಿಜ್ಞಾನ 4, ಭೂಗೋಳಶಾಸ್ತ್ರ 32, ಆಹಾರ ವಿಜ್ಞಾನ ಮತ್ತು ಪೌಷ್ಠಿಕತೆ 71, ಜೀವರಸಾಯನಶಾಸ್ತ್ರ 20, ಜೈವಿಕ ತಂತ್ರಜ್ಞಾನ 22, ಭೌತಶಾಸ್ತ್ರ 36, ಸೂಕ್ಷ?ಮ ಜೀವಶಾಸ್ತ್ರ 30, ಮನೋ ವಿಜ್ಞಾನ 32 ಅಭ್ಯರ್ಥಿಗಳು ಪದವಿ ಸ್ವೀಕರಿಸುವರು.
39 ಕೋಸ್ರ್ಗೆ ಯುಜಿಸಿ ಅನುಮತಿ:
ಮುಕ್ತ ವಿವಿಗೆ ನ್ಯಾಕ್ ಎ+ ಮಾನ್ಯತೆ ದೊರೆತಿದೆ. 51 ಕೋಸ್ರ್ಗಳಿಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸಲಾಗಿತ್ತು. 39 ಕೋಸ್ರ್ಗಳಿಗೆ ಅನುಮತಿ ದೊರೆತಿದೆ. ಉಳಿದ 12 ಕೋಸ್ರ್ಗಳಿಗೂ ಮಾನ್ಯತೆ ಸಿಗುವ ನಿರೀಕ್ಷೆಯಿದೆ. ಕೆಲವು ನ್ಯೂನತೆಗಳನ್ನು ಸರಿಪಡಿಸಿದರೆ ಎಲ್ಲ ಕೋಸ್ರ್ಗಳಿಗೂ ಅವಕಾಶ ದೊರೆಯಲಿದೆ. ಆನ್‍ಲೈನ್ ಕೋರ್ಸ್ ಆರಂಭವಾಗಲಿದ್ದು, ಜಿಲ್ಲಾ ಕೇಂದ್ರಗಳಲ್ಲಿ ಪ್ರಾದೇಶಿಕ ಕೇಂದ್ರ, ಸ್ಟಡಿ ಸೆಂಟರ್ ಆರಂಭಕ್ಕೆ ಚಿಂತನೆ ಮಾಡಿದ್ದೇವೆ. ಜೂನ್ ತಿಂಗಳಲ್ಲಿ 18600 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ಒಟ್ಟಿಗೆ ಎರಡು ಪದವಿ ಪಡೆಯಲು ಅವಕಾಶ ಇದೆ ಎಂದು ಕುಲಪತಿ ಪೆÇ್ರ.ಶರಣಪ್ಪ ವಿ.ಹಲಸೆ ಮಾಹಿತಿ ನೀಡಿದರು.
ಪರೀಕ್ಷಾಂಗ ಕುಲಸಚಿವ ಪೆÇ್ರ.ಕೆ.ಬಿ. ಪ್ರವೀಣ, ಕುಲಸಚಿವ ಪೆÇ್ರ.ಕೆ.ಎಲ್.ಎನ್.ಮೂರ್ತಿ ಸುದ್ದಿಗೋಷ್ಠಿಯಲ್ಲಿದ್ದರು.