ರಾಷ್ಟ್ರಪತಿ ಪದಕ ಪಡೆದ ಡಿವೈಎಸ್‌ಪಿ ಸುಬೇದಾರರಿಗೆ ಸನ್ಮಾನ

ಲಿಂಗಸುಗೂರು.ಜ.೯-ಕರ್ತವ್ಯ ದಕ್ಷತೆ, ಪ್ರಾಮಾಣಿಕತೆಯನ್ನು ಪರಿಗಣಿಸಿ ರಾಷ್ಟ್ರಪತಿ ಪದಕ ಪಡೆದ ಸೇವಾ ನಿರತ ಡಿವೈಎಸ್‌ಪಿ ಎಸ್.ಹೆಚ್.ಸುಬೇದಾರ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಜಿಲಾನಿಪಾಷಾ ನೇತೃತ್ವದಲ್ಲಿ ಕಾರ್ಯಕರ್ತರು ಸನ್ಮಾನಿಸಿ ಗೌರವಿಸಿದರು.
ಕರವೇ ಕಾರ್ಯದರ್ಶಿ ಶಿವರಾಜ ನಾಯ್ಕ, ನಗರ ಘಟಕ ಅಧ್ಯಕ್ಷ ಹನುಮಂತ ನಾಯಕ, ಖಜಾಂಚಿ ಅಜೀಜ್‌ಪಾಷಾ, ಇರ್ಫಾನ್ ಖುರೇಶಿ, ಜಮೀರ್‌ಖಾನ್ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.