ರಾಷ್ಟ್ರಪತಿ ಆಯ್ಕೆ:ಬಿಜೆಪಿ ಹರ್ಷ

ಕುಣಿಗಲ್, ಜು. ೨೩- ದೇಶದ ೧೫ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಬಿಜೆಪಿ ಬೆಂಬಲಿತ ಎನ್‌ಡಿಎ ಮಿತ್ರ ಪಕ್ಷದಿಂದ ಚುನಾಯಿತರಾದ ಹಿನ್ನೆಲೆಯಲ್ಲಿ ಕುಣಿಗಲ್‌ನ ಹುಚ್ಚು ಮಾಸ್ತಿಗೌಡ ವೃತ್ತದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಬಿದನಗೆರೆ ದೇವರಾಜ್, ಪುರಸಭಾ ಸದಸ್ಯರಾದ ಆನಂದ್‌ಕುಮಾರ್, ಗೋಪಿ, ಎಸ್‌ಸಿ ಮೋರ್ಚಾ ಅಧ್ಯಕ್ಷ ಶಿವರಾಮ್, ಒಬಿಸಿ ಮೋರ್ಚಾ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ಕೆ.ಎನ್. ಚಂದ್ರಶೇಖರ್, ಸುನಿಲ್, ಟೈಲರ್ ಕೃಷ್ಣಪ್ಪ, ಟೈಲರ್ ಸಂಘದ ಅಧ್ಯಕ್ಷರಾದ ಶಿವಕುಮಾರ್, ರಾಕೇಶ್, ಕಾರ್ಯದರ್ಶಿ ಎನ್. ಜಗನಾಥ್ ಮತ್ತಿತರರು ಪಾಲ್ಗೊಂಡಿದ್ದರು.