ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು:ಬಿಜೆಪಿ ವಿಜಯೋತ್ಸವ

ಚಿಕ್ಕನಾಯಕನಹಳ್ಳಿ, ಜು. ೨೬- ರಾಷ್ಟದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮ ರವರಿಗೆ ತಾಲ್ಲೂಕು ಭಾರತೀಯ ಜನತಾ ಪಾರ್ಟಿಯಿಂದ ವಿಜಯೋತ್ಸವ ಆಚರಿಸಲಾಯಿತು.
ಪಟ್ಟಣದ ನೆಹರು ಸರ್ಕಲ್‌ನಲ್ಲಿ ಆಯೋಜಿಸಿದ್ದ ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ತಾಲ್ಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಕೇಶವಮೂರ್ತಿ, ಪಕ್ಷದ ಬೆಂಬಲಿತ ರಾಷ್ಟ್ರಪತಿ ಅಭ್ಯರ್ಥಿ ದೌಪದಿ ಮುರ್ಮರವರು ಬುಡಕಟ್ಟು ಜನಾಂಗದ ಮೂಲದವರಾಗಿದ್ದು ಪ್ರಧಾನಿ ನರೇಂದ್ರ ಮೋದಿಯವರು ಅರನ್ನು ಗುರ್ತಿಸಿ ಬೆಂಬಲಿಸಿ ಭಾರತ ದೇಶದ ಪ್ರಪ್ರಥಮ ಮಹಿಳಾ ರಾಷ್ಟ್ರಪತಿಯನ್ನಾಗಿ ಮಾಡಲು ಸಾಕ್ಷಿಯಾಗಿದ್ದಾರೆ ಎಂದರು.
ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ಅನೇಕ ಜನಪರ ಯೋಜನೆಗಳು ಜಾರಿಯಲ್ಲಿದ್ದು ಜನಸಾಮಾನ್ಯರ ಬದುಕಿಗೆ ಪೂರಕವಾಗಿ ವಿವಿಧ ಕಾರ್ಯಗಳನ್ನು ಕೈಗೊಂಡಿದ್ದಾರೆ. ಪ್ರಸ್ತುತ ದೇಶದಲ್ಲಿ ಭಾರತೀಯ ಜನತಾ ಪಾರ್ಟಿಯು ಬಲವರ್ದನೆಯಾಗಿದ್ದು, ರಾಜ್ಯದಲ್ಲೂ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಮುಂದಿನ ಚುನಾವಣೆಗೆ ತಾಲ್ಲೂಕಿನಲ್ಲಿ ಪಕ್ಷ ಗೆಲುವು ಸಾಧಿಸಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಎಲ್ಲ ಕಾರ್ಯಕರ್ತರುಗಳು ಸನ್ನದ್ಧರಾಗಬೇಕು ಎಂದರು.
ಪಕ್ಷದ ಪ್ರಧಾನ ಕಾರ್ಯದರ್ಶಿ ಅಗಸರಳ್ಳಿ ಶಿವರಾಜು ಮಾತನಾಡಿ, ಬೇರೆ ಪಕ್ಷಗಳು ಮಾಡದಂತಹ ಮಹತ್ಕಾರ್ಯವನ್ನು ಬಿಜೆಪಿ ಪಕ್ಷವು ಬುಡಕಟ್ಟು ಜನಾಂಗದವರನ್ನು ಗುರುತಿಸಿ ದೇಶದ ಪ್ರಥಮ ಪ್ರಜೆಯನ್ನಾಗಿ ದ್ರೌಪದಿ ಮುರ್ಮ ರವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿ ಚುನಾವಣೆ ಕಣಕ್ಕಿಳಿಸಿ ಅಧಿಕ ಮತಗಳಿಂದ ಜಯಗಳಿಸಲು ನರೇಂದ್ರ ಮೋದಿಯವರು ಶ್ರಮ ಹಾಕಿದ್ದಾರೆ ಎಂದರು.
ವಿಜಯೋತ್ಸವದಲ್ಲಿ ಮುಖಂಡರಾದ ಸಿ.ಎಲ್.ಜಯದೇವ್, ನಿರುಗಲ್ಲು ಅನಂತಯ್ಯ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುಗುಣ, ಪುರಸಭಾ ಸದಸ್ಯ ಮಂಜುನಾಥಗೌಡ, ಪರಸಭಾ ನಾಮಿನಿ ಸದಸ್ಯರಾದ ಮಿಲಿಟರಿ ಶಿವಣ್ಣ, ಸಿ.ಮಲ್ಲಿಕಾರ್ಜುನಸ್ವಾಮಿ, ಪಕ್ಷದ ಯುವ ಮೋರ್ಚಾ ಅಧ್ಯಕ್ಷ ಅರಳೀಕೆರೆ ಉಮೇಶ್, ಕಾರ್ಯಕರ್ತರಾದ ಕಳಸೇಗೌಡ, ಪಾತಾಳಿ ರಾಮು, ಮಾಜಿ ಪುರಸಭಾ ಸದಸ್ಯ ಸಿ.ಎಸ್.ರೇಣುಕಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.