ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ ವಿಜಯೋತ್ಸವ

ಕೆಂಭಾವಿ:ಜು.23:ದೇಶದ ಎರಡನೆ ಮಹಿಳಾ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ ಶುಕ್ರವಾರ ಕೆಂಭಾವಿ ಮಹಾಶಕ್ತಿ ಘಟಕದ ವತಿಯಿಂದ ವಿಜಯೋತ್ಸವ ಆಚರಣೆ ಮಾಡಲಾಯಿತು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಯುವ ಮೋರ್ಚಾ ತಾಲೂಕಾಧ್ಯಕ್ಷ ಗಿರಿರಾಜ ಶಹಾಪುರ, ಬಿಜೆಪಿ ಆಡಳಿತದಲ್ಲಿ ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಉನ್ನತ ಸ್ಥಾನಮಾನ ನೀಡಿ ಅವರ ಮೇಲೆ ನಿಜವಾದ ಕಾಳಜಿಯನ್ನು ತೋರಿಸಿದೆ. ಈ ಹಿಂದೆ ಅಲ್ಪಸಂಖ್ಯಾತ ಸಮುದಾಯದ ಅಬ್ದುಲ್ ಕಲಾಂ, ದಲಿತ ಸಮುದಾಯದ ರಾಮನಾಥ ಕೋವಿಂದ ಹಾಗೂ ಇವಾಗ ಪರಿಶಿಷ್ಟ ಪಂಗಡದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆ ಮಾಡುವ ಮೂಲಕ ಸರ್ವರಿಗೂ ಸಮಪಾಲು, ಸಮಬಾಳು ಎಂದು ತೋರಿಸಿಕೊಟ್ಟಿದೆ ಎಂದು ಹೇಳಿದರು.

ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಶಂಕರ ಕರಣಗಿ ಮಾತನಾಡಿದರು. ಮಹಾಶಕ್ತಿ ಅಧ್ಯಕ್ಷ ಸಂಗಣ್ಣ ತುಂಬಗಿ, ಮುಖಂಡರಾದ ಶರಣಪ್ಪ ಯಾಳಗಿ, ನಿಂಗಪ್ಪ ಹಲಗಿ, ಬಸವರಾಜಯ್ಯ ಹೊಸಮನಿ, ಡಾ.ರವಿ ಅಂಗಡಿ, ಈರಣ್ಣ ಸೊನ್ನದ, ರವಿ ಸೊನ್ನದ, ಗುರುಮೂರ್ತಿ ಪತ್ತಾರ, ಬಸವಣ್ಣೆಪ್ಪ ಮಾಳಳ್ಳಿಕರ್, ಮಲ್ಲು ವಠಾರ, ಮರೆಪ್ಪ ಹದನೂರ, ಮಲ್ಲೇಶಪ್ಪ ಕಾಚಾಪುರ, ಈರಣ್ಣ ಕಿರದಳ್ಳಿ, ಶ್ರೀಶೈಲ್ ಕಾಚಾಪುರ, ಸಿದ್ದಣ್ಣ ನಡಕೂರ, ರಾಜು ಬಾಂಬೆ, ಶಿವಪ್ಪ ಕಂಬಾರ, ಶರಣಪ್ಪ ಗುಗ್ಗರಿ, ರಮೇಶ ಜಾಧವ, ಉಮೇಶರೆಡ್ಡಿ, ಹಳ್ಳೆಪ್ಪ ಕವಲ್ದಾರ, ಹನೀಫ್ ಕೊಕರ್, ನಂದಪ್ಪ, ಮಂಜು, ಶಿವು ಮಲ್ಲಿಬಾವಿ, ರವಿ ಮಿರ್ಜಿ, ಹಂಪಣ್ಣ, ರಾಮಣ್ಣ, ಸಚಿನ್, ದೇವು ಹಂದ್ರಾಳ, ಸುಭಾಸ ಮುದನೂರ, ರಾಜು ಚಿಕ್ಕಮಠ, ಬಸ್ಸು ದೊರೆ ಸೇರಿದಂತೆ ಅನೇಕರಿದ್ದರು.