ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ; ಬಿಜೆಪಿಯಿಂದ ಜಯದ ಸಂಭ್ರಮ

ದಾವಣಗೆರೆ. ಜು.೨೨; ಭಾರತೀಯ ಜನತಾ ಪಾರ್ಟಿ ಜಿಲ್ಲಾ ಘಟಕದ ವತಿಯಿಂದ ರಾಷ್ಟಪತಿ ಸ್ಥಾನಕ್ಕೆ ಬಿಜೆಪಿ ನೇತೃತ್ವದ ಎನ್.ಡಿ.ಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ  ದ್ರೌಪದಿ ಮುರ್ಮುರವರು ಜಯ ಗಳಿಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಚೇರಿಯಲ್ಲಿ ಸೇರಿ ನಂತರ ಜಯದೇವ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು. ಜಿಲ್ಲಾ ಅಧ್ಯಕ್ಷರಾದ  ಎಸ್.ಎಮ್ ವಿರೇಶ್ ಹನಗವಾಡಿರವರು ಈ ಸಂದರ್ಭದಲ್ಲಿ ಮಾತನಾಡಿ ಪ್ರತಿಯೊಬ್ಬ ಭಾರತೀಯನ ಪ್ರಜಾಪ್ರಭುತ್ವದ ಗೆಲುವಾಗಿದೆ ಹಾಗೂ ಇಡೀ ದೇಶದ ಹಿಂದುಳಿದ ವರ್ಗಗಳ ಜನರಿಗೆ ಅತ್ಯಂತ ಖುಷಿ ಪಡುವ ದಿನ, ಭಾರತದ ಜನತೆಗೆ ಇದೊಂದು ಐತಿಹಾಸಿಕ ದಿನವಾಗಿದೆ. ಇಡೀ ದೇಶ  ದ್ರೌಪದಿ ಮುರ್ಮುರವರ ಆಯ್ಕೆಯನ್ನು ಸಂಭ್ರಮಿಸುತ್ತಿದೆ ಎಂದರು.ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ  ಬಿ.ಎಸ್ ಜಗದೀಶ್, ಮಹಾನಗರಪಾಲಿಕೆ ಮಹಾಪೌರರಾದ  ಜಯಮ್ಮ ಗೋಪಿನಾಯ್ಕ್, ದೂಡಾ ಅಧ್ಯಕ್ಷರಾದ ಕೆ.ಎಂ ಸುರೇಶ್, ಜಿಲ್ಲಾ ಉಪಾಧ್ಯಕ್ಷರಾದ  ಮಂಜಾನಾಯ್ಕ್, ಮಹಾನಗರಪಾಲಿಕೆ ಸದಸ್ಯರಾದ ಸೋಗಿ ಗುರುಶಾಂತ್, ಪ್ರಸನ್ನಕುಮಾರ್, ಶಿವಪ್ರಕಾಶ್, ಜಿಲ್ಲಾ ಖಜಾಂಜಿ  ಬಾತಿ ವಿರೇಶ್, ಜಿಲ್ಲಾ ಮಾಧ್ಯಮ ಸಂಚಾಲಕರಾದ ಶ್ರೀ ವಿಶ್ವಾಸ್ ಹೆಚ್.ಪಿ, ಎಸ್.ಟಿ ಮೋರ್ಚ ಅಧ್ಯಕ್ಷರಾದ  ಕೆ.ಎಸ್ ಕೃಷ್ಣಕುಮಾರ್,  ಯಲ್ಲೇಶ್, ರಾಜೇಶ್.ಕೆ, ಶಂಕರಗೌಡ, ಶಿವನಗೌಡಪಾಟೀಲ್, ಶಿವು ತರಕಾರಿ, ಮಂಜಣ್ಣ ಹಾಗೂ ಇನ್ನೂ ಮುಂತಾದ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.