ರಾಷ್ಟ್ರಪತಿಗೆ ಸ್ಮೃತಿ ಅಗೌರವ ಸ್ವೀಕರ್‌ಗೆ ಚೌಧರಿ ಪತ್ರ


ನವದೆಹಲಿ,ಜು.೩೦- ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಸರನ್ನು ಸರಿಯಾಗಿ ಬಳಕೆ ಮಾಡದೆ ಅತ್ಯುನ್ನತ ಸ್ಥಾನಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಗೌರವ ತೋರಿದ್ದಾರೆ ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ದೂರಿದ್ದಾರೆ.
ಸದನದಲ್ಲಿ ಮಾತನಾಡುವಾಗ ಸ್ಮೃತಿ ಇರಾನಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು “ಮೇಡಮ್ ಅಥವಾ ಶ್ರೀಮತಿ” ಎಂದು ಕರೆಯದೆ ಅರಚಾಡಿದ್ದಾರೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಅವರಿಗೆ ಚೌಧರಿರವರು ಪತ್ರ ಬರೆದಿದ್ದಾರೆ.
ರಾಷ್ಟ್ರಪತಿ ಅವರ ಹೆಸರನ್ನು ಬಳಕೆ ಮಾಡುವಾಗ ಶಿಷ್ಟಾಚಾರ ಪಾಲಿಸಿಲ್ಲ .ಸಚಿವೆ ಸ್ಮೃತಿ ಇರಾನಿ ನಡೆ ಸರಿಯಾದುದಲ್ಲ ಎಂದು ಪತ್ರದಲ್ಲಿ ದೂರಿದ್ದಾರೆ.
ರಾಷ್ಟ್ರಪತಿಗಳ ಹೆಸರಿನ ಮುಂದೆ ಗೌರವಾನ್ವಿತ ರಾಷ್ಟ್ರಪತಿ ಅಥವಾ ಮೇಡಮ್ ಅಥವಾ ಶ್ರೀಮತಿ ಎಂದು ಉಚ್ಚಾರ ಮಾಡದೆ ಅಗೌರವ ತೋರಿದ್ದಾರೆ ಪದೇ ಪದೇ ‘ದ್ರೌಪದಿ ಮುರ್ಮು’ ಎಂದು ಕರೆದು ಅಗೌರವ ತೋರಿದ್ದಾರೆ ಎಂದಿದ್ದಾರೆ.
ರಾಷ್ಟ್ರಪತ್ನಿ ಎಂದು ಅಧೀರ್ ರಂಜನ್ ಚೌಧರಿ ಎಂದು ನೀಡಿದ ಹೇಳಿಕೆಯನ್ನು ಬಿಜೆಪಿ ನಾಯಕರು ದೊಡ್ಡ ವಿವಾದವನ್ನಾಗಿ ಮಾಡಿ ಕ್ಷಮೆ ಕೋರುವಂತೆ ಮಾಡಿದ್ದರು.
ಇದೀಗ ಅಧೀರ್ ರಂಜನ್ ಚೌದರಿ ಅವರು ರಾಷ್ಟ್ರಪತಿ ಬಗ್ಗೆ ಅಗೌರವ ತೋರಿದ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.