ರಾಷ್ಟ್ರಪತಿಗೆ ಅವಹೇಳನ – ಕಾಂಗ್ರೆಸ್ ಕ್ಷಮೆಗೆ ಒತ್ತಾಯ

ರಾಯಚೂರು.ಜು.೨೮- ಕಾಂಗ್ರೆಸ್ಸಿನ ಸಂಸದ ಆದಿ ರಂಜನ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅವಮಾನಗೊಳಿಸುವ ರೀತಿಯಲ್ಲಿ ಹೇಳಿಕೆ ನೀಡಿರುವುದನ್ನು ರಾಜ್ಯ ಎಸ್ಟಿ ಮೋರ್ಚಾದ ಅಧ್ಯಕ್ಷರಾದ ತಿಪ್ಪರಾಜು ಅವರು ಖಂಡಿಸಿದ್ದಾರೆ.
ಬುಡಕಟ್ಟು ಜನಾಂಗಕ್ಕೆ ಸೇರಿದ ಮತ್ತು ರಾಷ್ಟ್ರದ ಸರ್ವೋಚ್ಛ ಸ್ಥಾನದಲ್ಲಿರುವ ನಾಯಕರ ಬಗ್ಗೆ ಈ ರೀತಿ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯವಾಗಿದೆ. ಕಾಂಗ್ರೆಸ್ ಪಕ್ಷ ಎಸ್ಸಿ, ಎಸ್ಟಿ ಎಂದು ಹೇಳುವ ಮೂಲಕ ಈ ರೀತಿ ಅಪಮಾನಿಸುತ್ತಿರುವುದು ಅವರ ತತ್ವ ಸಿದ್ಧಾಂತದ ಬದ್ಧತೆ ಪ್ರದರ್ಶಿಸುತ್ತದೆ. ಮೂರು ಸೇನೆಗಳ ಅಧಿನಾಯಕರಾದ ಮತ್ತು ದೇಶದ ಪ್ರಥಮ ಪ್ರಜೆಗಳಾದ ರಾಷ್ಟ್ರಪತಿಯನ್ನು ಈ ರೀತಿ ಅವಹೇಳನ ಮಾಡಿರುವುದನ್ನು ತೀವ್ರವಾಗಿ ಖಂಡಿಸಲಾಗುತ್ತದೆ. ಮತ್ತು ಸಂಪೂರ್ಣ ಈ ರೀತಿ ಅವಮಾನ ಮಾಡಿದ ಕಾಂಗ್ರೆಸ್ ಪಕ್ಷ ದೇಶದ ಮುಂದೆ ಕ್ಷಮಾಪಣೆ ಕೇಳಬೇಕು.
ಅಲ್ಲದೆ, ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಅವರು ಕ್ಷಮೆ ಕೋರಬೇಕೆಂದು ಆಗ್ರಹಿಸಿದ್ದಾರೆ. ಬೆಳ್ಳಾರೆನಲ್ಲಿ ನಡೆದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಪ್ರವೀಣ್ ಅವರ ಕೊಲೆಯನ್ನು ತೀವ್ರವಾಗಿ ಖಂಡಿಸಲಾಗುತ್ತದೆ. ಹಂತಕರನ್ನು ಕಠಿಣವಾಗಿ ಶಿಕ್ಷಿಸಬೇಕೆಂದು ಅವರು ಆಗ್ರಹಿಸಿದ್ದಾರೆ.